ಡಂಗ್ಯೂ ಒಂದು ಅಪಾಯವಾದ ಜ್ವರ, ಇದನ್ನು ಸರಿಯಾದ ಸಮಯದಲ್ಲಿ ಗುಣಪಡಿಸದಿದ್ದರೆ ಜೀವವನ್ನೆ ಕಳೆದುಕೊಳ್ಳಬೇಕಾಗುತ್ತದೆ.ಡೆಂಗ್ಯೂ ಜ್ವರವು ಸೊಳ್ಳೆಯಿಂದ ಬರುವ ಒಂದು‌ ವೈರಲ್ ಇನ್ಫೆಕ್ಷನ್!

ವಿಶ್ವದಲ್ಲೇ ಭಾರತದಲ್ಲಿ ಹೆಚ್ಚು ಜನ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದು ಭಾರತದಲ್ಲಿ ಡೆಂಗ್ಯೂ ಗೆ ಒಳಗಾಗಿರುವ ಸಂಖ್ಯೆ 10 ಕೋಟಿಗೂ ಅಧಿಕ!

ಡೆಂಗ್ಯೂ ಬಂದದ್ದು ಹೇಗೆ ಗೊತ್ತಾಗುತ್ತದೆ?

ಡೆಂಗ್ಯೂ ಬಂದದ್ದು ಎಷ್ಟೋ ಜನಕ್ಕೆ ತಡವಾಗಿ ತಿಳಿಯುತ್ತದೆ, ಆದರೂ ಇದನ್ನು ಬೇಗ ತಿಳಿಯಲು ಇಲ್ಲಿವೆ ಅಂಶಗಳು:

ಡೆಂಗ್ಯೂ ಜ್ವರದ ಲಕ್ಷಣಗಳು:

1. ವಿಪರೀತ ಜ್ವರ:

ಇದೀಗ ಸಾಮಾನ್ಯವಾಗಿ ಬರುವ ಜ್ವರ ಕೂಡಾ ಡೆಂಗ್ಯೂ ಜ್ವರವಾಗಿ ಪರಿಣಮಿಸುತ್ತದೆ, ಹೀಗಾಗಿ ಜ್ವರ ಬಂದರೆ ನಿರ್ಲಕ್ಷಿಸದೇ ರಕ್ತವನ್ನು ಪರೀಕ್ಷಿಸಿ.

3. ಮೈ ಕೈ ಕಾಲು ನೋವು:

ಡೆಂಗ್ಯೂ ಜ್ವರ ಬರುವಾಗ ಮನುಷ್ಯನ ಕೈ ಕಾಲುಗಳಲ್ಲಿ ವಿಪರೀತ ನೋವು ಕಾಣಿಸುತ್ತದೆ!

3. ಕಣ್ಣಿನ ಹಿಂದೆ ನೋವು:

ಡೆಂಗ್ಯೂ ಬಂದಾಗ ಕಣ್ಣಿನ ಸುತ್ತ ಮುತ್ತ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಮನುಷ್ಯನ ಕಣ್ಣುಗಳು ಕೆಂಪಾಗಿ ಗೋಚರಿಸುತ್ತವೆ.

4. ತಲೆನೋವು:

ಇದೊಂದು ಪ್ರಮುಖವಾದ ಡೆಂಗ್ಯೂ ನ ಲಕ್ಷಣ, ಜ್ವರ ಬರುವ ಸಮಯದಲ್ಲಿ ಮತ್ತು ಬಂದಾಗ ಭಯಂಕರ ತಲೆ ನೋವು ಬರುತ್ತದೆ.

5. ವಾಂತಿ:
ಇದೊಂದು ಡೆಂಗ್ಯೂ ನ ಸಾಮಾನ್ಯ ಲಕ್ಷಣವಾಗಿದ್ದು ಡೆಂಗ್ಯೂ ‌ರೋಗಿಗಳಲ್ಲಿ ವಾಂತಿ ಕಾಣಿಸಿಕೊಳ್ಳುತ್ತದೆ.

6. ಆಯಾಸ:

ಡೆಂಗ್ಯೂ ಜ್ವರ ಬಂದಾಗ ಮನುಷ್ಯನಿಗೆ ವಿಪರೀತ ಆಯಾಸ ಸುಸ್ತು ಉಂಟಾಗುತ್ತದೆ.

7. ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ:

ಗಂಟಲಿನ ಗ್ರಂಥಿಗಳಲ್ಲಿ ಬಾವು ಕಾಣಿಸಿಕೊಳ್ಳುತ್ತದೆ.

ಯಾವುದೇ ಸಣ್ಣ ಜ್ವರ ಬಂದರೂ ನಿರ್ಲಕ್ಷಿಸಬೇಡಿ ರಕ್ತವನ್ನು ಪರೀಕ್ಷಿಸಿಕೊಳ್ಳಿರಿ ಮತ್ತು ಮನೆಗಳಲ್ಲಿ ಸ್ವಚ್ಚತೆ ಕಾಪಾಡಿ ಸೊಳ್ಳೆಗಳು ಬರದಂತೆ ಎಚ್ಚರ ವಹಿಸಿರಿ.

LEAVE A REPLY

Please enter your comment!
Please enter your name here