ಕಚೇರಿ ಕೆಲಸ,ಮನೆ ಕೆಲಸ ಅಥವಾ ಹೊರಗಡೆ ಓಡಾಡಿ ಸುಸ್ತಾಗಿದ್ದೀರಾ? ಹಾಗಿದ್ದರೆ ಹೊಟ್ಟೆಗೆ ಒಂಚೂರು ಹಾಕಿಕೊಳ್ಳಲೇಬೇಕು ಎಂದಾದರೆ ಈ ಆಹಾರ ಸೇವಿಸಿ.ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಹೆಚ್ಚಾಗಿ ಕ್ರೀಡಾ ತಾರೆಗಳು ಪಂದ್ಯದ ನಡುವೆ ಡ್ರಿಂಕ್ಸ್ ಬ್ರೇಕ್ ನಲ್ಲಿ ಬಾಳೆ ಹಣ್ಣು ಸೇವಿಸುವುದನ್ನು ನೀವು ಗಮನಿಸಿರಬಹುದು.ಒಣ ಹಣ್ಣುಗಳಲ್ಲಿ ಕೊಬ್ಬು ಮತ್ತು ಪೋಷಕಾಂಶಗಳು ಸಮಪ್ರಮಾಣದಲ್ಲಿರುತ್ತವೆ.ಇದು ನಮ್ಮ ದೇಹದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿ ಇರಿಸುತ್ತದೆ.ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ.

ಎಲ್ಲಕ್ಕಿಂತ ಹೆಚ್ಚು ನಮಗೆ ಉಪಯುಕ್ತವಾದುದು ನೀರು.ಶ್ರಮದ ಕೆಲಸ ಮಾಡಿದಾಗ ದೇಹ ಡಿಹೈಡ್ರೇಟ್ ಆಗುವುದು ಸಹಜ. ಅಂತಹ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿದರೆ ಮತ್ತೆ ಉತ್ಸಾಹ ಮರಳುತ್ತದೆ.ಮೊಟ್ಟೆ ಶಕ್ತಿದಾಯಕ ಆಹಾರ.

ಇದು ಪೋಷಕಾಂಶಗಳ ಆಗರ. ಇದರಲ್ಲಿರುವ ವಿಟಮಿನ್ ಬಿ ಅಂಶ ನಮ್ಮ ದೇಹಕ್ಕೆ ಮಾತ್ರವಲ್ಲ, ಮಾನಸಿಕವಾಗಿಯೂ ಗಟ್ಟಿ ಮಾಡುತ್ತದೆ.ಸೊಪ್ಪು ತರಕಾರಿಗಳಲ್ಲಿ ಫೈಬರ್,ಆಂಟಿ ಆಕ್ಸಿಡೆಂಟ್ ಪೋಷಕಾಂಶಗಳು ಹೆಚ್ಚಾಗಿರುತ್ತದೆ.ಇವು ಮೂರೂ ನಮ್ಮ ದೇಹಕ್ಕೆ ಶಕ್ತಿ ನೀಡಲು ಸಹಾಯಕ.

LEAVE A REPLY

Please enter your comment!
Please enter your name here