ನಿಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳಬೇಕೇ? ಈ ಆಹಾರಗಳನ್ನು ಸೇವಿಸಿರಿ..

0
5350

ದೇಹದಲ್ಲಿ ಕೆಂಪು ಮತ್ತು ಬಿಳಿ ರಕ್ತಕಣಗಳ ಬಗ್ಗೆ ನಾವು ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಬಿಳಿ ರಕ್ತ ಕಣಗಳ ಕುರಿತಂತೆ ಮಾತನಾಡುವುದನ್ನು ಕೇಳಿರಬಹುದು.ಮಾರಣಾಂತಿಕ ರೋಗಗಳಿಗೆ ತುತ್ತಾದವರಲ್ಲಿ ಈ ಬಿಳಿ ರಕ್ತಕಣಗಳು ಕಡಿಮೆಯಾಗಿದೆ ಎಂದು ವೈದ್ಯರು ಹೇಳುತ್ತಿರುತ್ತಾರೆ.ದೇಹದಲ್ಲಿನ ರಕ್ತದ ಕಣಗಳು ಸ್ವಲ್ಪ ಏರುಪೇರಾದರೂ ಮನುಷ್ಯನ ಆರೋಗ್ಯವು ಹದಗೆಡುವುದರಲ್ಲಿ ಅನುಮಾನವಿಲ್ಲ.ಕೆಂಪು ರಕ್ತದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಆಧುನಿಕ ಯುಗದ ಆಹಾರ ವ್ಯವಸ್ಥೆಯೂ ಒಂದು ರೀತಿಯ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.

ದೇಹದ ಆರೋಗ್ಯಕ್ಕೆ ಪ್ರಮುಖ ಪಾತ್ರವಹಿಸುವ ಬಿಳಿ ರಕ್ತ ಹಚ್ಚಿಸಿಕೊಳ್ಳಲು ಕೆಲವೊಂದಿಷ್ಟು ಆಹಾರ ಪದಾರ್ಥಗಳು

ಮೊಸರಿನಲ್ಲಿ ವಿಟಮಿನ್ ಡಿ ಇದ್ದು ಇದನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಶೀತ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಬರುವುದನ್ನು ತಡೆಯಬಹುದು. 70% ರೋಗನಿರೋಧಕ ಅಂಶವು ನಮ್ಮ ಜೀರ್ಣಾಂಗದಲ್ಲಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆದರೆ ಮಾತ್ರ ಅದು ದೇಹಕ್ಕೆ ದೊರೆಯುತ್ತದೆ. ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ.

ಗ್ರೀನ್ ಟೀ ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸುತ್ತದೆ, ರಕ್ತ ಕಣಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರೋಗ ನಿರೋಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಸುವ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿಯಲ್ಲಿ ಪ್ರೊಟೀನ್, ವಿಟಮಿನ್ ,ಬಿ, ಸಿ ಸೇರಿದಂತೆ ಹಲವು ಪೌಷ್ಠಿಕಾಂಶಗಳದ್ದು, ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಬಹಳ ಉತ್ತಮ ಔಷಧಿಯಾಗಿದೆ.

ಬಸಳೆ ಸೊಪ್ಪನ್ನು ಪೌಷ್ಠಿಕಾಂಶದ ಸೊಪ್ಪು ಎಂತಲೂ ಕರೆಯಲಾಗುತ್ತದೆ. ಪ್ರತೀ ನಿತ್ಯ ಸೊಪ್ಪನ್ನು ತಿನ್ನುತ್ತಾ ಬಂದರೆ ದೇಹದ ಆರೋಗ್ಯ ಹೆಚ್ಚಾಗುತ್ತದೆ.

ಸಿಹಿ ಗೆಣಸಿನಲ್ಲಿ ಕೆರೊಟಿನಾಯ್ಡ್ ಗಳು ಹೆಚ್ಚಾಗಿದೆ. ವಿಟಮಿನ್ ಎಯನ್ನು ಅಧಿಕ ಪ್ರಮಾಣದಲ್ಲಿದ್ದು ದೇಹಕ್ಕೆ ಪೋಷಕಾಂಶ ಹಾಗೂ ನಾರಿನಂಶ ಒದಗಿಸಿ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.

ಅಣಬೆ ಅತೀ ಹೆಚ್ಚು ಪ್ರೊಟೀನ್ ಯುಕ್ತ ಆಹಾರವಾಗಿದ್ದು, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು antioxidants ಅಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ.

ಹೆಚ್ಚಾಗಿ ಕೋಸುಗಡ್ಡೆ ತಿನ್ನಬೇಕು, ಕೋಸುಗಡ್ಡೆಯಿಂದ ಪದಾರ್ಥಗಳನ್ನು ಮಾಡಬಹುದು, ಸೂಪ್ ಮಾಡಿ ಕುಡಿಯಬಹುದು, ಕೋಸುಗಡ್ಡೆ ಸಲಾಡ್ ಕೂಡ ತಯಾರಿಸಬಹುದು. ಆಹಾರಗಳನ್ನು ತಿನ್ನುತ್ತಾ ಬಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಕೋಸು ಗಡ್ಡೆಯಲ್ಲಿ ಆರೋಗ್ಯಕರ ಅಂಶಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಉತ್ತಮವಾದ ಆಹಾರವಾಗಿದೆ.

ಜವೆ ಗೋಧಿಯಲ್ಲಿ ಅಣಬೆಯಲ್ಲಿರುವಂತೆ ಅತೀ ಹೆಚ್ಚು ಪೌಷ್ಠಿಕಾಂಶಗಳಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಿವಿ ಹಣ್ಣಿನಲ್ಲಿ ಪೋಷಕಾಂಶಗಳು ಅತೀ ಹೆಚ್ಚಿದ್ದು, ಪ್ರತಿದಿನ ಹಣ್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಬಾದಾಮಿಯಲ್ಲಿ 50% ವಿಟಮಿನ್ ಅಂಶವಿದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ, ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here