ನಿಮ್ಮ ಹಳದಿ ಹಲ್ಲನು ಬಿಳಿಯಾಗಿಸಬೇಕೇ? ಇವುಗಳನ್ನು ತಿನ್ನಿ

0
776

ಹಳದಿ ಹಲ್ಲು ಹೇಗೆ ಬಿಳಿಯಾಗಿಸೋದು.ಬೆಳ್ಳಗಿನ ಹಲ್ಲನ್ನು ಹೇಗೆ ಉಳಿಸಿಕೊಳ್ಳೋದು ಎಂಬ ಚಿಂತೆಯೇ? ಹಾಗಿದ್ದರೆ ಈ ಹಣ್ಣುಗಳನ್ನು ದಿನನಿತ್ಯ ನಿಮ್ಮ ಆಹಾರದಲ್ಲಿ ಸೇವಿಸಿ..

ಸೇಬುಹಣ್ಣು
ಸೇಬು ಹಣ್ಣಿನಲ್ಲಿರುವ ನಾರಿನಂಶ ಹಲ್ಲಿನ ಕೊಳೆಯನ್ನು ನಿವಾರಿಸುತ್ತದೆ.ಇದರಲ್ಲಿರುವ ಮಾಲಿಕ್ ಆಸಿಡ್ ಅಂಶ ಹೆಚ್ಚು ಜೊಲ್ಲು ರಸ ಉತ್ಪಾದನೆಯಾಗುವಂತೆ ಮಾಡುತ್ತದೆ.

ಇದರಿಂದ ಹಲ್ಲಿನ ನಡುವೆ ಸಿಲುಕಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ.

ಕ್ಯಾರೆಟ್

ಹಸಿ ಕ್ಯಾರೆಟ್ ತಿನ್ನುವಾಗ ನಿಮ್ಮ ಹಲ್ಲಿಗೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ.ಹೆಚ್ಚು ಅಗಿಯುವಂತಹ ಆಹಾರ ತಿನ್ನುವಾಗ ಹೆಚ್ಚು ಜೊಲ್ಲು ರಸ ಉತ್ಪಾದನೆಯಾಗುತ್ತದೆ.

ಇದರಿಂದ ನಿಮ್ಮ ಹಲ್ಲಿನಲ್ಲಿ ಕೊಳೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ.

ಬಸಳೆ ಸೊಪ್ಪು
ಮುತ್ತಿನಂತಹ ಸುಂದರ ಹಲ್ಲು ಬೇಕಾದರೆ ಆದಷ್ಟು ಸೊಪ್ಪು ತರಕಾರಿ ಸೇವಿಸಬೇಕು.ಬಸಳೆ ಸೊಪ್ಪಿನಂತಹ ಸೊಪ್ಪು ತರಕಾರಿಗಳಲ್ಲಿರುವ ಕಬ್ಬಿಣದಂಶ ಹಲ್ಲನ್ನು ಬಿಳುಪಾಗಿಸುವ ಶಕ್ತಿ ಹೊಂದಿದೆ.

ಇದಲ್ಲದೆ, ಆದಷ್ಟು ಒಣ ಹಣ್ಣು, ನಾರಿನಂಶಗಳಿರುವ ಆಹಾರಗಳು, ಖರ್ಜೂರದಂತಹ ಆಹಾರಗಳು ಹಲ್ಲನ್ನು ಬಿಳಿಯಾಗಿಸುವ ಶಕ್ತಿ ಹೊಂದಿದೆ. ಹಾಗಾಗಿ ಅಂತಹ ಆಹಾರಗಳನ್ನು ಆದಷ್ಟು ಸೇವಿಸಿ ಸುಂದರ ಬಿಳಿಯಾದ ಹಲ್ಲು ನಿಮ್ಮದಾಗಿಸಿ.

LEAVE A REPLY

Please enter your comment!
Please enter your name here