ಭಾರತೀಯರ ಪ್ರತಿಯೊಂದು ಅಡುಗೆ ಮನೆಯಲ್ಲಿ ಇರುವಂತಹ,ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವ ಶ್ರೇಯಸ್ಸು ಪಡೆದಿರುವ ಏಲಕ್ಕಿಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.ಪ್ರತಿಯೊಬ್ಬರಿಗೂ ಏಲಕ್ಕಿ ಸುವಾಸನೆಯೆಂದರೆ ಇಷ್ಟ.ಇದು ತುಂಬಾ ಸಣ್ಣ ಬೀಜವಾದರೂ ಅದರಲ್ಲಿರುವ ಆರೋಗ್ಯ ಲಾಭಗಳು ಮಾತ್ರ ಅನೇಕ.ಇಂತಹ ಏಲಕ್ಕಿಯಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ.

ಏಲಕ್ಕಿ ನೀರು ಸೇವನೆ ಮಾಡುವುದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ.ಯಾವುದೇ ಪದಾರ್ಥಕ್ಕೆ ಹಾಕಿದರೂ ಅದು ಸುವಾಸನೆ ಹಾಗೂ ರುಚಿ ಅಧಿಕಗೊಳಿಸುವುದು.ಏಲಕ್ಕಿ ಹಾಕಿದ ನೀರು ಒಂದು ವಾರ ಕಾಲ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು.

ಇದು ಹಲ್ಲಿನ ಸಮಸ್ಯೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಪರಿಣಾಮಕಾರಿ.ಬಾಯಿಯ ದುರ್ವಾಸನೆ ನಿವಾರಣೆ ಮಾಡಿ,ತಾಜಾ ಉಸಿರು ನೀಡುವುದು. ಏಲಕ್ಕಿಯಲ್ಲಿರುವ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ದೇಹಕ್ಕೆ ಹಲವಾರು ಲಾಭಗಳನ್ನು ನೀಡಲಿದೆ..

ದೇಹದ ವಿಷಕಾರಿ ಅಂಶ ಹೊರಹಾಕಲು….ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಏಲಕ್ಕಿ ನೀರು ಪ್ರಮುಖ ಪಾತ್ರ ವಹಿಸುವುದು.ಕಿಡ್ನಿ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುವುದುದಂತ ಆರೋಗ್ಯಕ್ಕಾಗಿ ಹೆಚ್ಚಿನ ಮೌಥ್ ಪ್ರೆಶ್ನರ್ ಮತ್ತು ಟೂಥ್ ಪೇಸ್ಟ್ ಗಳಲ್ಲಿ ಏಲಕ್ಕಿ ಬಳಸಲಾಗುತ್ತದೆ.ಇದು ಬಾಯಿಯ ದುರ್ವಾಸನೆ ತಡೆಯುವುದು ಮತ್ತು ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು.ಬಾಯಿಯ ಅಲ್ಸರ್ ಹಾಗೂ ಸೋಂಕಿ ನಿಂದ ನಿವಾರಣೆ ನೀಡುವುದು.

ಪ್ರತಿರೋಧಕ ಶಕ್ತಿ ವೃದ್ಧಿ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಲ್ಲಿ ಏಲಕ್ಕಿ ನೀರು ಪ್ರಮುಖ ಪಾತ್ರ ವಹಿಸುವುದು. ಇದು ಹಲವಾರು ರಿತಿಯ ವೈರಲ್ ಮತ್ತು ಜ್ವರದ ಸೋಂಕಿನ ವಿರುದ್ಧ ಹೋರಾಡುವುದು ಮತ್ತು ದೇಹಕ್ಕೆ ರಕ್ಷಣೆ ನೀಡುವುದು.ಗಂಟಲಿನ ಸೋಂಕು ಉಂಟಾಗಿದ್ದರೂ ನೀವು ಇದನ್ನು ಏಲಕ್ಕಿ ನೀರಿನಿಂದ ನಿವಾರಣೆ ಮಾಡಬಹುದು. ಶ್ವಾಸನಾಳಗಳ ಒಳಪೊರೆಯ ಉರಿಯೂತ ತಡೆಯುವುದು

ವಯಸ್ಸಾಗುವ ಲಕ್ಷಣಗಳ ವಿರುದ್ಧ ಹೋರಾಟ ಏಲಕ್ಕಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣವು ಸಮೃದ್ಧವಾಗಿರುವ ಕಾರಣದಿಂದ ಇದು ದೇಹದಲ್ಲಿ ವಯಸ್ಸಾಗುವ ಲಕ್ಷಣ ತಡೆಯುವುದು. ಇದು ದೇಹದಲ್ಲಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು.ಇದರಿಂದ ಚರ್ಮವು ಕಾಂತಿಯುತವಾಗಿರುವುದು.

ಕ್ಯಾನ್ಸರ್ ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಬೆಳವಣಿಗೆ ನಿಯಂತ್ರಿಸುತ್ತದೆ ಹಾಗೂ ಈ ಮೂಲಕ ಕ್ಯಾನ್ಸರ್ ಎದುರಾಗುವ ಸಂಭವ ಕಡಿಮೆಯಾಗುತ್ತದೆ.ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಗೆ ಗುರಿಯಾದ ಜೀವಕೋಶಗಳನ್ನೂ ಕೊಲ್ಲುತ್ತದೆ.

ಏಲಕ್ಕಿ ನೀರು ತಯಾರಿಸುವುದು ಹೇಗೆ?

ಕೆಲವು ಏಲಕ್ಕಿಗಳನ್ನು ರುಬ್ಬಿಕೊಂಡು ಅದರ ಹುಡಿ ಮಾಡಿಕೊಳ್ಳಿ. ಇದನ್ನು ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿ.ಈ ಮಿಶ್ರಣಕ್ಕೆ ಕೆಲವು ಏಲಕ್ಕಿ ಮೊಗ್ಗುಗಳನ್ನು ಹಾಕಿ. ನೀರನ್ನು ಕುದಿಸಿ,ಆದರೆ ಅತಿಯಾಗಿ ಕುದಿಸಬೇಡಿ.ಅತಿಯಾಗಿ ಕುದಿಸಿದರೆ ಅದರಿಂದ ನೀರಿನ ರುಚಿ ಕೆಟ್ಟು ಹೋಗಿ,ಕಹಿಯಾಗುವುದು. ಇದನ್ನು ಹಾಗೆ ತಣಿಯಲು ಬಿಟ್ಟುಬಿಡಿ. ಬಳಿಕ ಮೂರು ಚಮಚ ಏಲಕ್ಕಿ ನೀರನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ. ಸ್ವಲ್ಪ ಲಿಂಬೆರಸ ಹಾಕಿಕೊಂಡು ಕುಡಿದರೂ ಒಳ್ಳೆಯದು.

LEAVE A REPLY

Please enter your comment!
Please enter your name here