ಚಳಿಗಾಲ ಬಂತೆಂದರೆ ಹಲವರಿಗೆ ಭಯ ಆರಂಭವಾಗುತ್ತದೆ. ಅದರಲ್ಲೂ ಹೆಚ್ಚಾಗಿ ಚಳಿಗಾಳಿ ಬೀಸುವ ಪ್ರದೇಶಗಳಲ್ಲಿ ವಾಸಿಸುವವರಿಗಂತೂ ಉಸಿರಾಟದ ಸಮಸ್ಯೆ ಆರಂಭವಾಗಿ ಯಾವಾಗ ಈ ಚಳಿಗಾಲ ಮುಗಿಯುತ್ತೋ ಅನ್ನಿಸುವುದಕ್ಕೆ ಶುರುವಾಗುತ್ತದೆ.ತಂಪುಗಾಳಿ ಚರ್ಮದ ಆರೋಗ್ಯವನ್ನು ಹದಗೆಡಿಸುವ ಜೊತೆಗೆ ಮೂಗು ಕಟ್ಟುವಿಕೆಗೂ ಕಾರಣವಾಗುತ್ತದೆ.

ಇದು ಬಹುದೊಡ್ಡ ಸಮಸ್ಯೆಯೇನಲ್ಲದಿದ್ದರೂ ಯಾವ ಕೆಲಸವನ್ನೂ ಮಾಡಲು ಕೊಡದಷ್ಟು ಕಿರಿಕಿರಿಯನ್ನುಂಟುಮಾಡುತ್ತದೆ.ಜ್ವರ, ಕಫ, ಕೆಮ್ಮು, ಉಸಿರಾಟದ ಸಮಸ್ಯೆ, ಮೂಗುಕಟ್ಟುವಿಕೆ,ಚರ್ಮದ ತೊಂದರೆ ಮುಂತಾದವು ಚಳಿಗಾಲದಲ್ಲಿ ಸಾಮಾನ್ಯ.

ಹವಾಮಾನ ಏಕಾಏಕಿ ಬದಲಾಗುವುದರಿಂದ ದೇಹದ ಆರೋಗ್ಯದ ಮೇಲೂ ಅದು ಪ್ರಭಾವ ಬೀರುವುದು ಸಮಾಜ.ಆದರೆ ಚಳಿಗಾಲದ ಹಲವು ಸಮಸ್ಯೆಗಳಿಗೆ ನೀಲಗಿರಿ ಎಣ್ಣೆ ಪರಿಣಾಮಕಾರಿ ಪರಿಹಾರ ಎಂಬುದನ್ನು ಇತ್ತೀಚಿನ ಹಲವು ಸಂಶೋಧನೆಗಳು ದೃಢಪಡಿಸಿವೆ.ವೈದ್ಯಕೀಯ ಲೋಕದಲ್ಲಿ ನೀಲಗಿರಿ ಎಣ್ಣೆಯ ಉಪಯುಕ್ತತೆಯನ್ನು ಎಲ್ಲ ತಜ್ಞ ವೈದ್ಯರೂ ಒಪ್ಪಿಕೊಳ್ಳುತ್ತಾರೆ.

ನೀಲಗಿರಿ ಎಣ್ಣೆ ಬ್ಯಾಕ್ಟೀರಿಯಾ, ಫಂಗಸ್ ಮುಂತಾದ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.ಅಷ್ಟೇ ಅಲ್ಲದೆ ಚಳಿ ಹವೆಯಿಂದ ಆರಂಭವಾಗುವ ಮೈ ಕೈ ನೋವನ್ನೂ ಪರಿಹರಿಸುವ ಶಕ್ತಿ ಇದಕ್ಕಿದೆ.ಒಂದರ್ಥದಲ್ಲಿ ಇದು ಪೇನ್ ಕಿಲ್ಲರ್ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತದೆ.ಮೂಗು ಕಟ್ಟುವಿಕೆಯ ಸಮಸ್ಯೆ ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕಾಣಿಸಿಕೊಂಡು ನಿದ್ದೆಯನ್ನು ಹಾಳುಮಾಡುತ್ತದೆ.

ಆದ್ದರಿಂದ ಪ್ರತಿದಿನ ಮಲಗುವ ಮೊದಲು ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿ, ಆ ನೀರಿಗೆ ಎರಡು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ಆ ಹಬೆಯನ್ನು ಉಸಿರಾಡಿ. ಹತ್ತು ನಿಮಿಷ ಹೀಗೆ ಮಾಡುವುದರಿಂದ ಮೂಗು ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ.

ಅಕಸ್ಮಾತ್ ಹಗಲಿನ ಸಮಯದಲ್ಲೂ ನಿಮಗೆ ಮೂಗುಕಟ್ಟುವ ಸಮಸ್ಯೆ ಕಾಡಿದರೆ ನಿಮ್ಮ ಕರವಸ್ತ್ರಕ್ಕೆ ಒಂದೆರಡು ಹನಿ ನೀಲಗಿರಿ ಎಣ್ಣೆಯನ್ನು ಸಿಂಪಡಿಸಿಕೊಂಡು ಹೋಗಿ.ಮೂಗು ಕಟ್ಟುವುದಕ್ಕೆ ಶುರುವಾಗಿದೆ ಅನ್ನಿಸಿದರೆ ನೀಲಗಿರಿ ಎಣ್ಣೆಯ ವಾಸನೆಯನ್ನು ಆಗಾಗ ಆಘ್ರಾಣಿಸುತ್ತಿರಿ.

ಇದರಿಂದ ಮೂಗುಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಯಾವುದೇ ಕಾರಣಕ್ಕೆ ಈ ಎಣ್ಣೆಯನ್ನು ಕಣ್ಣು ಅಥವಾ ಮುಖಕ್ಕೆ ತಾಕಿಸಿಕೊಳ್ಳಬೇಡಿ. ಕೀಲುನೋವು ಇತ್ಯಾದಿ ಸಮಸ್ಯೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೋವಿರುವ ಜಾಗಕ್ಕೆ ನೀಲಗಿರಿ ಎಣ್ಣೆಯನ್ನು ತೆಳುವಾಗಿ ಹಚ್ಚಿಕೊಂಡು ತಿಕ್ಕುತ್ತಿರಿ. ಸಮಸ್ಯೆ ಬೇಗನೇ ಗುಣವಾಗುತ್ತದೆ.

LEAVE A REPLY

Please enter your comment!
Please enter your name here