ಸರ್ವರೋಗಕ್ಕೂ ನುಗ್ಗೆ ಮದ್ದು ಎಂಬ ಮಾತು ತಲತಲಾಂತರಗಳಿಂದ ಪ್ರಚಲಿತವಾಗಿದೆ. ಏಕೆಂದರೆ ನುಗ್ಗೆಯ ಪ್ರತಿಯೊಂದು ಭಾಗವೂ ಔಷಧೀಯ ಗುಣವನ್ನು ಹೊಂದಿದೆ.

ಇದರ ಎಲೆ,ಬೇರು,ಹೂವು,ತೊಗಟೆ ಎಲ್ಲದರಲ್ಲಿಯೂ ಔಷಧೀಯ ಅಗಾಧ ಶಕ್ತಿಯೇ ಅಡಗಿದೆ. ಅದರ ಬಗ್ಗೆ ಇಲ್ಲಿ ತಿಳಿಯೋಣ…

ಇದನ್ನೂ ಓದಿರಿ…

ಕರಿಬೇವಿನ ಉಪಯೋಗ ಓದಿದರೆ ನೀವು ದಿನ ಉಪಯೋಗಿಸೋಕೆ ಶುರು ಮಾಡುತ್ತೀರ…

ನುಗ್ಗೆಸೊಪ್ಪು ಲೈಂಗಿಕ ಶಕ್ತಿ ವೃದ್ಧಿಸಲು ಸಹಕಾರಿ. ನುಗ್ಗೆ ಸೊಪ್ಪು ಚಹಾವನ್ನು ಪ್ರತಿದಿನ ಕುಡಿಯುವುದರಿಂದ ಕಳೆದುಹೋದ ಲೈಂಗಿಕ ಶಕ್ತಿಯನ್ನು ಮತ್ತೆ ಪಡೆಯಬಹುದು.

ನುಗ್ಗೆ ಸೊಪ್ಪಿನ ರಸವನ್ನು ಜೇನು ತುಪ್ಪಕ್ಕೆ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಅರ್ಧ ಚಮಚ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

ನುಗ್ಗೆ ಸೊಪ್ಪನ್ನು ಎದೆಹಾಲಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ನುಗ್ಗೆಸೊಪ್ಪು ರಕ್ತ ಶುದ್ಧೀಕರಿಸುವ ಜತೆಗೆ ಮೂಳೆಗಳನ್ನು ಬಲಪಡಿಸುತ್ತದೆ.

ನುಗ್ಗೆ ಚಕ್ಕೆಯನ್ನು ತೆನೆ ಇಲ್ಲದ ಹಾಲಿನಲ್ಲಿ ತೇಯ್ದು ಮೂರು ದಿನ ಕುಡಿದರೆ ಮಕ್ಕಳಲ್ಲಿ ಕಾಡುವ ಕೆಮ್ಮು ಶಮನಗೊಳ್ಳುವುದು.

LEAVE A REPLY

Please enter your comment!
Please enter your name here