ನೆಲ್ಲಿಕಾಯಿ ತಿನ್ನೋಕೆ ಹುಳಿ ನಮ್ಮ ಆರೋಗ್ಯಕ್ಕೆ ಸಿಹಿ…ಓದಿ ಅದರ ಉಪಯೋಗಗಳನ್ನು

0
1527

ಸಾಮಾನ್ಯವಾಗಿ ನೆಲ್ಲಿಕಾಯಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ ಇದನ್ನು ಆಮ್ಲ ಜ್ಯೂಸ್ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ,ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ.

ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ.ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.ಇದನ್ನು ಹೇಗೆ ಉಪಯೋಗಿಸಬಹುದು,ಇದರ ಉಪಯೋಗಗಳೇನು?

ತಿಳಿಯಲು ಮುಂದೆ ಓದಿರಿ…

ನೆಲ್ಲಿಕಾಯಿಯು ಅಸ್ತಮಾವನ್ನು ಕಡಿಮೆ ಮಾಡುತ್ತದೆ ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು.

ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ.ದೀರ್ಘಕಾಲದ ಮಲಬದ್ಧತೆ ಗುಣವಾಗುವುದು ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

ರಕ್ತವನ್ನು ಶುದ್ಧೀಕರಿಸುತ್ತದೆ ತಾಜಾ ಆಮ್ಲ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.ಮೂತ್ರ ಉರಿ ಶಮನ ಮಾಡುತ್ತದೆ 30mlಆಮ್ಲ ಜ್ಯೂಸ್ ಅನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಯೆ ಇರುವುದಿಲ್ಲ.

ಸೆಕೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ ಸೆಕೆಗಾಲದಲ್ಲಿ ದೇಹ ಬೆಂದು ಹೋದ ಅನುಭವ ಉಂಟಾಗುವುದು,ಸೆಕೆಯನ್ನು ತಡೆಯಲು ಪ್ರತೀದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.ಮುಟ್ಟಿನ ಸಮಯದಲ್ಲಿ ಒಳ್ಳೆಯದು ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

ಮುಖದ ಅಂದಕ್ಕೆ ಆಮ್ಲ ಜ್ಯೂಸ್ ಅನ್ನು ಸ್ವಲ್ಪ ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮುಖದಲ್ಲಿ ಬಿಳಿ ಮಚ್ಚೆ, ಮೊಡವೆ, ಬ್ಯ್ಯಾಕ್ ಹೆಡ್ಸ್ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ, ಮುಖದ ಕಾಂತಿ ಹೆಚ್ಚುವುದು.

LEAVE A REPLY

Please enter your comment!
Please enter your name here