ಕ್ಯಾನ್ಸರ್ ಎಂದರೆ ಸಾವಿನ ಬಾಗಿಲು ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ.ಆದರೆ ಎಲ್ಲಾ ಕ್ಯಾನ್ಸರ್‍‌ಗಳು ಮಾರಣಾಂತಿಕವಲ್ಲ.ಪ್ರಾರಂಭಿಕ ಹಂತದಲ್ಲಿದ್ದರೆ ಖಂಡಿತಾ ಗುಣಪಡಿಸಬಹುದು.ಅಲ್ಲದೇ ರಕ್ತ, ಕರುಳು,ಗರ್ಭಾಶಯ ಮೊದಲಾದ ಕ್ಯಾನ್ಸರ್‍‌ಗಳು ಮಾತ್ರ ಉಲ್ಬಣಾವಸ್ಥೆ ತಲುಪಿದರೆ ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆ ಕಡಿಮೆ.

ಅದರಲ್ಲೂ ಕರುಳಿನ ಕ್ಯಾನ್ಸರ್ ಬೇಗನೇ ವೃದ್ಧಿಗೊಳ್ಳುವ ಮತ್ತು ಚಿಕಿತ್ಸೆ ಕಷ್ಟವಿರುವ ಕಾಯಿಲೆಯಾಗಿದ್ದು ಇದರ ದುಷ್ಪರಿಣಾಮಗಳಿಂದ ದೇಹದ ಇತರ ಅಂಗಗಳೂ ಬಾಧೆಗೊಳಗಾಗುತ್ತವೆ.ಆದರೆ ಈ ಕ್ಯಾನ್ಸರ್ ಅನ್ನು ತಡೆಗಟ್ಟಲು ನಮಗೆಲ್ಲಾ ಚಿರಪರಿಚಿತವಾಗಿರುವ ಹಣ್ಣಿನ ಸೇವನೆಯೇ ಸಾಕು. ಅದು ಯಾವ ಹಣ್ಣು ಗೊತ್ತೇ? ಹಲಸಿನ ಹಣ್ಣು

ನೋಡಲು ಮುಳ್ಳುಗಳಿರುವ ವಿಕಾರ ಹೊರಭಾಗದ ಈ ಹಣ್ಣಿನ ತೊಳೆಗಳು ಮಾತ್ರ ಆರೋಗ್ಯಕರವಾಗಿದ್ದು ಕ್ಯಾನ್ಸರ್ ಕಣಗಳನ್ನು ಕೊಲ್ಲಲು ಶಕ್ತವಿರುವ ಔಷಧಿಯೂ ಆಗಿದೆ. ಹಲಸಿನಿಂದ ಹಲವಾರು ಖಾದ್ಯ,ಹಪ್ಪಳ,ಸಿಹಿತಿನಿಸುಗಳನ್ನು ತಯಾರಿಸಲಾಗುತ್ತದೆ.

ಆದರೆ ಇದುವರೆಗೆ ಈ ಹಣ್ಣಿನ ಸೇವನೆಯಿಂದ ಕರುಳಿನ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು ಹಾಗೂ ಪ್ರಾರಂಭಿಕ ಹಂತದಲ್ಲಿದ್ದರೆ ಗುಣಪಡಿಸಲೂಬಹುದು ಎಂದು ನಮಗೆಲ್ಲಾ ಗೊತ್ತೇ ಇರಲಿಲ್ಲ.

ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ.ಇದರ ದಾರು ಹಳದಿ ಬಣ್ಣ ಹೊಂದಿದೆ.ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ.

ಸಾದಾರಣ ಹೊಳಪು ಬರುತ್ತದೆ. ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ.ಅಲ್ಲದೆ ಇದರಿಂದ ಮನೆಯ ಉಪಯೋಗದ ಫರ್ನಿಚರ್ ಮಾಡಲು ಬಳಸುತ್ತಾರೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ -ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು,ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ.ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದ

ವಿಟಮಿನ್ ಸಿಯನ್ನು ಒಳಗೊಂಡಂತೆ ಹಲಸಿನ ಹಣ್ಣು,ಲಿಗಾನ್ಸ್,ಐಸೋಫ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ಧಿಸುವುದರ ವಿರುದ್ದ ಹೋರಾಡುತ್ತದೆ.

ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ

LEAVE A REPLY

Please enter your comment!
Please enter your name here