ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ವ್ಯಾಲೆಟ್ ಅಂದರೆ ‘ಪರ್ಸ್’ ಅನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ. ನೀವು ಹಾಗೇ ಮಾಡ್ತಿದ್ರೆ ಇವಾಗಿಂದಲೇ ನಿಲ್ಲಿಸಿ.

 

ಇಲ್ಲಿ ಪರ್ಸನ್ನ ಹಿಂದುಗಡೆ ಇಟ್ಕೊ ಬೇಡಿ ಅಂತಿರೋದು ಕಳ್ಳರ ಸಮಸ್ಯೆಯಿಂದ ಅಲ್ಲ ಬದಲಾಗಿ ನಿಮ್ಮ ದೇಹದ ಉಳಿವಿಗಾಗಿ.

ಅಂದ ಹಾಗೆ ನಿಮ್ಮ ಪರ್ಸ್ ನ ಕೆಳಗಡೆ ಇಟ್ಕೊಂಡು ಕುಳಿತುಕೊಳ್ಳೊಂದ್ರಿಂದ ಏನೆಲ್ಲಾ ತೊಂದರೆ ಇವೆ ಗೊತ್ತಾ?

ಇದು ಸಹಜ ಅನಿಸಿದರೂ ಹಗುರವಾಗಿ ತಗೋಬೇಡಿ ನಿಮ್ಮ ಜೀವದ ಬಗ್ಗೆ ಕಾಳಜಿ ಕೊಡಿ.

ನಿಮ್ಮ ಪರ್ಸ್ ಅಲ್ಲಿ ಆಧಾರ್ ಕಾರ್ಡ್, ಎ.ಟಿ.ಎಮ್ ಅದು ಇದು ಹಾಳೆಗಳು, ಬಸ್ ಟಿಕೆಟ್ಸ್ ಮತ್ತು ಸ್ವಲ್ಪ ಹಣ ಇರಬಹುದು ಇದರಿಂದ ನಿಮ್ಮ ಪರ್ಸ್ ದಪ್ಪ ಆಗಿದ್ರೆ ದಯವಿಟ್ಟು ಅದನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳಿ.

ಬ್ಯಾಗಿನ ಬದಲು ಹಿಂದಿನ ಜೇಬಲ್ಲಿ ಇಟ್ಟುಕೊಳ್ಳುವುದು ರೂಡಿಸಿಕೊಂಡರೆ ನಿಮ್ಮ ಜೀವಕ್ಕೆ ಕುತ್ತು ಕಟ್ಟಿಟ ಬುತ್ತಿ.

ಹೇಗೆ ಪರ್ಸ್ ಇಂದ ಅಪಾಯ?:

ನೀವು ಬಲಗಡೆ ಅಥವಾ ಎಡಗಡೆ ಹಿಂದಿನ ಜೇಬಿನಲ್ಲಿ ಪರ್ಸ್ ಇಟ್ಕೊಂಡು ಕೂಡೋದ್ರಿಂದ ಬೆನ್ನಿನಲ್ಲಿ ‘ಅಸಮತೋಲನ'(imbalance) ಉಂಟಾಗುತ್ತದೆ.

ಅಷ್ಟೇ ಅಲ್ಲ ಈ ಅಸಮತೋಲನದಿಂದ ನಿಮ್ಮ ಸೊಂಟ ಮತ್ತು ಕಿಡ್ನಿಗಳಿಗೆ ಹಾನಿಯಾಗುತ್ತದೆ.

ಬೆನ್ನು ಮೂಳೆ ಮುರಿತ:

ನೀವು ಒಂದು ಭಾಗದಲ್ಲಿ ಪರ್ಸ್ ಇಟ್ಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಬೆನ್ನು ಮೂಳೆ( spinal cord) ಗೆ ಭಾರಿ ಪ್ರಮಾಣದ ತೊಂದರೆ ಆಗುವ ಸಾಧ್ಯತೆಗಳು ಇವೆ.

ಬೆನ್ನು ಮೂಳೆ ಮುರಿತ ಹೇಗೆ?:

ನೀವು ನಿಮ್ಮ ದಪವಾಗಿರೋ ಪರ್ಸ್ ಅನ್ನು ಕೆಳಗಡೆ ಇಟ್ಟುಕೊಂಡು ಕುಳಿತಾಗ ನಿಮ್ಮ ಇನ್ನೊಂದು ಭಾಗ ಕೆಳಗಿರುತ್ತದೆ ಇದರಿಂದ ಅಸಮತೋಲನ ಉಂಟಾಗಿ ನಿಮ್ಮ ಬೆನ್ನು ಮೂಳೆ ವಾಲುತ್ತದೆ.

ದಪ್ಪ ದಪ್ಪ ಪರ್ಸ್ ಅನ್ನು ಕೆಳಗಡೆ ಇಟ್ಟುಕೊಂಡು ಕೂಡುವದರಿಂದ ಬರಿ ನಿಮ್ಮ ಕುತ್ತಿಗೆಗೂ ತೊಂದರೆಗಳಿವೆ.

ಇದರಿಂದ ನಿಮಗೆ ಸೊಂಟ ಮತ್ತು ಬೆನ್ನು ಗಳಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ.

ಈ ತೊಂದರೆಗಳು ತಕ್ಷಣ ಕಾಣಿಸಿಕೊಳ್ಳದಿದ್ದೂ ಕಾಲ ಕಳೆದಂತೆ ನಿಮ್ಮ ಬೆನ್ನಿನ ಭಾಗಗಳಲ್ಲಿ ಭಾರಿ ನೋವನ್ನು ಉಂಟು ಮಾಡುತ್ತದೆ.

 

ಪರ್ಸ್ ಅನ್ನು ಹಿಂದಿನ ಜೇಬಲ್ಲಿ ಇಟ್ಟುಕೊಳ್ಳುವುದರಿಂದ ಆಗುವ ತೊಂದರೆಗಳು:

 

1. ಬೆನ್ನ ಮೂಳೆಯ ಮುರಿತ.

2. ಕುತ್ತಿಗೆ ಮತ್ತು ನರಗಳಿಗೆ ತೊಂದರೆ‌

3. ಸೊಂಟ ಮತ್ತು ಕಿಡ್ನಿಗಳಿಗೆ ಹಾನಿ.

4. ಬೆನ್ನು ನೋವು.

ಇನ್ಮೇಲಾದ್ರೂ ಈ ಅಭ್ಯಾಸ ದೂರ ಮಾಡಿ ಬೆನ್ನಿನ ಬಗ್ಗೆ ಕಾಳಜಿ ವಹಿಸಿ. ನೀವು ದಪ್ಪ ಪರ್ಸ್ ಅನ್ನು ಹಿಂದಿನ ಜೇಬಲ್ಲಿ ಇಟ್ಕೊಂಡು ಕುಳಿತಾಗ ನಿಮ್ಮ ಗಮನಕ್ಕೆ ಬರದೇ ನಿಮ್ಮ ದೇಹ ಒಂದು ಬದಿ ವಾಲಿರುತ್ತದೆ, ಬೇಕಾದ್ರೆ ಟ್ರೈ ಮಾಡಿ.

1 COMMENT

LEAVE A REPLY

Please enter your comment!
Please enter your name here