ಪಾಲಾಕ್ ಸೊಪ್ಪು ಒಂದು ಪೌಷ್ಟಿಕಾಂಶಯುಕ್ತವಾದ ಸೊಪ್ಪಾಗಿದೆ.ಇದರಲ್ಲಿ ವಿಟಮಿನ್ ‘ಎ’ ಅಂಶ ಚೆನ್ನಾಗಿದ್ದು,ಚರ್ಮದ ಕಾಂತಿ ಹೆಚ್ಚಲು,ಮುಪ್ಪು ಮುಂದೂಡಲು ಪ್ರಮುಖ ಪಾತ್ರ ವಹಿಸುತ್ತದೆ. ಪಾಲಾಕ್,ಬಿಪಿಯನ್ನು ಹತೋಟಿಗೆ ತರುತ್ತದಲ್ಲದೆ,ಕೊಲೆಸ್ಟ್ರಾಲ್ ಹೆಚ್ಚಾಗದೇ ಇರುವ ಹಾಗೆ ಮಾಡುವ ಗುಣ ಇದಕ್ಕಿದೆ.

ಪಾಲಾಕ್ ಸೊಪ್ಪಿನಲ್ಲಿ ಗಣನೀಯ ಪ್ರಮಾಣದಲ್ಲಿರುವ ಶರ್ಕರ ಪಿಷ್ಟ,ಪ್ರೊಟಿನ್,ಕ್ಯಾಲ್ಸಿಯಂ,ಕಬ್ಬಿಣದ ಅಂಶಗಳು ಆರೋಗ್ಯ ಕಾಪಿಡುವಲ್ಲಿ ಸಹಕಾರಿಯಾಗಿದೆ.

ತರಕಾರಿಯಾಗಿ ಆಡುಗೆಯಲ್ಲಿ ಉಪಯೋಗಿಸಲ್ಪಡುತ್ತದೆ.ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ,ಪ್ರೋಟಿನ್‍ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಇದೆ.ಪಾಲಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಹೇಗೆ ಇದು ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು ತ್ವಚೆಗೆ ಕೂಡ ಒಳ್ಳೆಯದು.ಪಾಲಕ್ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್,ತುರಿಕೆ ಮತ್ತು ಒಣಚರ್ಮವನ್ನು ತಡೆಯುವುದಕ್ಕೆ ತುಂಬ ಒಳ್ಳೆಯದು.

ಇದು ಕೂದಲ ಬೆಳವಣಿಗೆಗೂ ಬಹಳ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ,ಸಿ,ಇ ಪೊಟ್ಯಾಷಿಯಂ,ಕಬ್ಬಿಣ ಮತ್ತು ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ ಈ ಅಂಶಗಳು,ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಅದರಲ್ಲು ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕು ತಲುಪಿಸಲು ಸಹಾಯಕಾರಿ ಆಗಿದೆ.

ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲ ಉದುರುವಿಕೆಯನ್ನು ತಡೆಯಬಹುದು.ಕೂದಲು ಉದುರುವುದಕ್ಕೆ ಮುಖ್ಯ ಕಾರಣವೆಂದರೆ ಕೂದಲ ಬುಡದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಪಾಲಕ್ ಸೊಪ್ಪು ಕಬ್ಬಿಣದ ಅಂಶವನ್ನು ಕೂದಲ ಬುಡಕ್ಕೆ ಒದಕಿಸುವುದರಿಂದ ಕೂದಲು ಉದುರುವುದು ಕ್ರಮೇಣ ಕಡಿಮೆ ಆಗುತ್ತದೆ.

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಇವುಗಳು ತ್ವಚೆಯ ಸೆಳೆತ ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ, ಹಾಗೆಯೇ ವಿಟಮಿನ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ.

ಅಲ್ಲದೆ ಹಳೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ.

ಪಾಲಕ್ ಸೊಪ್ಪು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ. ಅತಿನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕುರುಹುಗಳು ಬೇಗ ಬರುವಂತೆ ಮಾದುತ್ತದೆ, ಆದರೆ ಪಾಲಕ್ ಸೊಪ್ಪು ಕ್ಯಾನ್ಸರ್ ಮತ್ತು ವೃದ್ಧಾಪ್ಯ ಬರದಂತೆ ತಡೆಯುತ್ತದೆ.

LEAVE A REPLY

Please enter your comment!
Please enter your name here