ಬಿಲ್ವಪತ್ರೆ ಪೂಜೆಗಳಲ್ಲಿ ಶ್ರೇಷ್ಠವಾದದ್ದು ಮಾತ್ರವಲ್ಲದೇ,ಇವುಗಳಲ್ಲಿ ಹಲವು ಬಗೆಯ ಅನಾರೋಗ್ಯ ಸಮಸ್ಯೆಗಳನ್ನೂ ಹೊಡೆ ದೋಡಿಸುವ ಗುಣಗಳಿವೆ.ಬಿಲ್ವ ಮರದ ಬೇರು, ತೊಗಟೆ, ಪತ್ರೆ, ಹೂ,ಕಾಯಿ,ಹಣ್ಣು ಹೀಗೆ ಸಂಪೂರ್ಣ ಮರವೇ ಔಷಧಿಯ ಆಗರ.

ಬಿಲ್ವವೃಕ್ಷದ ಬೇರಿನ ಮತ್ತು ಮರದ ನಡುವಿನ ತಿರುಳಿನ ಭಸ್ಮದಲ್ಲಿ ಸೋಡಿಯಂ,ಪೊಟ್ಯಾಶಿಯಂ, ಕ್ಯಾಲ್ಸಿಯಂ,ಲೋಹ,ರಂಜಕ,ಸಿಲಿಕಾ ಅಂಶಗಳು ಹೇರಳವಾಗಿದ್ದು ಇದು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.ಸಂಬಂಧಿತ ಸಮಸ್ಯೆಗಳಿಗೆ ಎಲೆಗಳನ್ನು ಅರೆದು ಮುದ್ದೆ ಮಾಡಿ,ರಸ ತೆಗೆದು ಅಥವಾ ಒಣಗಿಸಿ ಪುಡಿ ಮಾಡಿ ಉಪಯೋಗಿಸಿದರೆ ಒಳ್ಳೆಯದು.

ಬೇರನ್ನು ಪುಡಿ ಮಾಡಿ ಅಥವಾ ತೇಯ್ದು ಉಪಯೋಗಿಸಬೇಕು.ಕಾಯಿಯ ಒಳಗಿನ ತಿರುಳನ್ನು ಒಣಗಿಸಿ ಪುಡಿ ಮಾಡಿ,ಇಲ್ಲವೆ ಕಷಾಯ ಮಾಡಿ ಉಪಯೋಗಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ.ಇವೆಲ್ಲಾ ನಮ್ಮ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯೋಣ.

ಈಗ ಎಲ್ಲೆಲ್ಲೂ ಮಧುಮೇಹದ ಸಮಸ್ಯೆ.ಇದನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧ ಇದು ವರೆಗೆ ಕಂಡುಹಿಡಿದಿಲ್ಲ.ಆದರೆ ಬಿಲ್ವಪತ್ರೆ ಸೇವನೆಯಿಂದ ಇದನ್ನು ಸಂಪೂರ್ಣ ನಿಯಂತ್ರಣ ದಲ್ಲಿ ಇರಿಸಬಹುದು.ಇದರ ಎಲೆ ಸೇವಿಸುವುದು ಅಥವಾ ಹಣ್ಣಿನ ಪಾನಕ (ಸಕ್ಕರೆ ಹಾಕದೇ) ಕುಡಿಯಬೇಕು.

ಸರಿಯಾಗಿ ಕಿವಿ ಕೇಳಿಸುತ್ತಿಲ್ಲವೆಂದರೆ ಬಿಲ್ವದ ಎಣ್ಣೆ ಯನ್ನು 4-5 ಡ್ರಾಪ್ ಕಿವಿಗೆ ಬಿಡುತ್ತ ಬರಬೇಕು.ಇದರಿಂದ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗುತ್ತದೆಅತಿಸಾರ,ಜ್ವರ,ಮೂತ್ರ ಸಂಬಂಧಿತ ರೋಗಗಳಿಗೆ ಬಿಲ್ವಪತ್ರೆ ಸಿದ್ಧೌಷಧಿ.ಈ ಸಮಸ್ಯೆಗಳಿಂದ ಬಳಲುತ್ತಿರುವವರು ಬಿಲ್ವದ ಎಲೆಯ ಕಷಾಯದ ಸೇವನೆ ಮಾಡುತ್ತಾ ಬರಬೇಕು.ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಿಲ್ವಪತ್ರೆ ಉತ್ತಮ  ಔಷಧವಾಗಿದೆ.

ಇದು ಉಷ್ಣಗುಣ ಹೊದಿರುವ ಕಾರಣ, ಜೀರ್ಣಕ್ರಿಯೆ ಹೆಚ್ಚಿಸುತ್ತದೆ.ಬೇವಿನ ಮರದ ಚಕ್ಕೆ ಮತ್ತು ಬಿಲ್ವದ ಮರದ ಚಕ್ಕೆ ಎರಡೂ ಸಮಪ್ರಮಾಣದಲ್ಲಿ ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಹಾಲಿನ ಜೊತೆ ಕುಡಿದರೆ ಪಿತ್ತ,ಹುಳಿತೇಗು, ಹೊಟ್ಟೆನೋವು,ಹೊಟ್ಟೆ ಉಬ್ಬರ ಇವೆಲ್ಲವೂ ಕಡಿಮೆಯಾಗುತ್ತವೆ.

ಬಿಲ್ವದ ಹಣ್ಣಿನಿಂದ ಪಾನಕ ಮಾಡಿ ಕುಡಿಯುತ್ತ ಬಂದರೆ ಬೊಜ್ಜು ಕರಗುತ್ತದೆ.ಕಣ್ಣಿನ ಕಾಯಿಲೆಗಳು, ಕಿವುಡತನದ ಸಮಸ್ಯೆಗಳಿಗೂ ಇದು ಪರಿಹಾರ ಒದಗಿಸುತ್ತದೆ.ಸುಮಾರು 10 ಗ್ರಾಂ ಬಿಲ್ವದ ಲೇಹ ಸೇವಿಸುವುದರಿಂದ ಗ್ಯಾಸ್ಟ್ರಿಕ್ ತೊಂದರೆ ನಿವಾರಣೆಯಾಗುತ್ತದೆ.

ಬಿಲ್ವದ ಹಣ್ಣಿನ ಸೇವನೆಯಿಂದ ಒಸಡಿನಲ್ಲಿನ ರಕ್ತಸ್ರಾವ,ಕೆಮ್ಮು,ನೆಗಡಿ, ಹೊಟ್ಟೆಯ ತೊಂದರೆಗಳು,ಗರ್ಭಿಣಿಯರಲ್ಲಾಗುವ ವಾಕರಿಕೆ ಗಳನ್ನೂ ನಿಯಂತ್ರಣ ಮಾಡಬಹುದು.ಜ್ವರ,ಗಂಟಲು ನೋವು ಇದ್ದಾಗ 5-6 ಚಮಚ ಕಷಾಯ ಕುಡಿದರೆ ನಿವಾರಣೆಯಾಗುತ್ತದೆ.10 ಗ್ರಾಂ ನಷ್ಟು ಬಿಲ್ವದ ಚೂರ್ಣ ಸೇವಿಸಿದರೆ ಭೇದಿ ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.

ಬಿಲ್ವದ ಎಲೆಗಳನ್ನು ನೀರು ಮಿಶ್ರಿತ ದಿಂದ ಅರೆದು ಕಣ್ಣುಗಳ ರೆಪ್ಪೆಯ ಮೇಲೆ ಲೇಪಿಸಿದರೆ ದೃಷ್ಟಿ ವೃದ್ಧಿಸುತ್ತದೆ.ಬಿಲ್ವಪತ್ರೆಯ ತಂಬುಳಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ.ಇದಕ್ಕಾಗಿ ನಾಲ್ಕೈದು ಬಿಲ್ವಪತ್ರೆ,ಅರ್ಧ ಚಮಚ ಜೀರಿಗೆ, 5-6 ಕಾಳುಮೆಣಸನ್ನು ಹುರಿದುಕೊಂಡು ಇದಕ್ಕೆ ಕಾಲು ಬಟ್ಟಲು ತೆಂಗಿನ ತುರಿ,ಕಾಲು ಚಮಚ ಸಕ್ಕರೆ,ಉಪ್ಪು ಹಾಕಿ ಮಿಕ್ಸಿ ಮಾಡಿಕೊಳ್ಳಿ.

ಇದಕ್ಕೆ ಮಜ್ಜಿಗೆ ಸೇರಿಸಿದರೆ ತಂಬುಳಿ ಸಿದ್ಧವಾಗುತ್ತದೆ.ಬಿಲ್ವ ಮರದ ತೈಲ, ಬೇರಿನ ಪುಡಿ ಲೇಹ ಇವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಹಲವರಿಗೆ ಕಷ್ಟವಾಗಬಹುದು.ಆದರೆ ಗ್ರಂಧಿಗೆ ಅಂಗಡಿಗಳಲ್ಲಿ ಇವು ದೊರಕುವ ಕಾರಣ, ಅಲ್ಲಿಂದಲೇ ಖರೀದಿಸಿ ಉಪಯೋಗಿಸಬಹುದು.

LEAVE A REPLY

Please enter your comment!
Please enter your name here