ರಾತ್ರಿ ತಾಮ್ರದ ಪಾತ್ರೆ ಅಥವಾ ಚಂಬಿನಲ್ಲಿ ನೀರನ್ನು ಶೇಖರಣೆ ಮಾಡಿ,ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಉಪಯೋಗಗಳು ಹೀಗಿವೆ.

ಹೀಗೆ ಮಾಡಿ ನೀರು ಕುಡಿಯುವುದರಿಂದ ಕೊಲೆಸ್ಟರಾಲ್,ಟ್ರೈಗ್ಲಿಜರೈಡ್ ಪ್ರಮಾಣ ಕಡಿಮೆಯಾಗಿ,ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಥೈರಾಯಿಡ್ ಗ್ರಂಥಿಯ ಕಾರ್ಯ ಉತ್ತಮಗೊಳ್ಳುತ್ತದೆ. ಅನೇಕ ರೋಗಗಳು ದೂರವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಮೆದುಳು ಚುರುಕಾಗುತ್ತದೆ. ನೆನಪಿಗೆ ಶಕ್ತಿ ಬೆಳವಣಿಗೆಗೂ ಸಹಕಾರಿ.ಆಡುಗೆ ಮಾಡಲು ತಾಮ್ರ ಪಾತ್ರೆಯನ್ನು ಪ್ರತಿನಿತ್ಯ ಉಪಯೋಗಿಸುವುದರಿಂದ ಮೂಳೆಗಳು ಗಟ್ಟಿಯಾಗಿ, ಆರೋಗ್ಯವಾಗಿರುತ್ತವೆ.

ಮೂತ್ರಪಿಂಡದ ಸಮಸ್ಯೆಗಳನ್ನು ದೂರ ಮಾಡುತ್ತದೆ.ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು, ಚರ್ಮ ಸುಕ್ಕುಗಟ್ಟುವುದು, ವಯಸ್ಸಾದಂತೆ ಕಾಣುವುದು ಮುಂತಾದ ಸಮಸ್ಯೆಗಳು ಬರದಂತೆ ತಡೆಯುತ್ತದೆ‌.

ಮಲಬದ್ಧತೆ,ಹೃದಯಾಘಾತ, ಇತ್ಯಾದಿ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ.ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಸೇವಿಸುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಡಬಹುದು.ರಕ್ತ ಪ್ರಸರಣ ಉತ್ತಮಗೊಂಡು ಮೆದುಳು ಚೂರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಬೆಳೆಯುವ ಮಕ್ಕಳಿಗೆ ತುಂಬಾ ಉಪಯುಕ್ತ.

LEAVE A REPLY

Please enter your comment!
Please enter your name here