ವಿಟಾಮಿನ್, ಖನಿಜ, ಆಂಟಿ ಆಕ್ಸಿಡೆಂಟ್‌ಗಳನ್ನು ಹೇರಳವಾಗಿ ಹೊಂದಿರುವ ಒಣ ದ್ರಾಕ್ಷಿ, ಮಕ್ಕಳು ಹಾಗೂ ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಅತ್ಯುತ್ತಮ. ಇವರು ಎಷ್ಟು ಸಾಧ್ಯವೇ ಅಷ್ಟು ಒಣ ದ್ರಾಕ್ಷಿಗಳನ್ನು ತಿನ್ನಬೇಕು.

ಅಷ್ಟೇ ಅಲ್ಲ,ಒಣ ದ್ರಾಕ್ಷಿ ಕ್ಯಾನ್ಸರ್ ಕಾರಕ ಜೀವಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನೂ ಹೊಂದಿದೆ. ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿಡುವಲ್ಲೂ ಇದರ ಪಾತ್ರ ಮಹತ್ವದ್ದು.ಇನ್ನು ವೈರಸ್,ಫಂಗಸ್ನ ವಿರುದ್ಧ ಕೂಡ ಇದು ದೇಹಕ್ಕೆ ರಕ್ಷಣೆ ನೀಡಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಭರಿತವಾಗುತ್ತವೆ.

ಒಣದ್ರಾಕ್ಷಿಯಲ್ಲಿ ವಿಟಮಿನ್ನುಗಳು ಹೆಚ್ಚಾಗಿವೆ. ರಕ್ತಹೀನತೆಯನ್ನು ತಡೆಯುತ್ತದೆ.ಒಣದ್ರಾಕ್ಷಿಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿಯಿದೆ.ಇವುಗಳನ್ನು ನಿರಂತರವಾಗಿ ದಿನಕ್ಕೆ ಆರು ಇಲ್ಲ ಐದು ತೆಗೆದುಕೊಂಡರೆ ಸಣ್ಣಕರುಳಿನಲ್ಲಿರುವ ವ್ಯರ್ಥ

ಪದಾರ್ಥಗಳನ್ನು ಸುಲಭವಾಗಿ ಹೊರಹೊಗುತ್ತವೆ.ಆಯುರ್ವೇದದಲ್ಲಿ ಒಣದ್ರಾಕ್ಷಿಗೆ ಮಹತ್ವದ ಸ್ಥಾನಮಾನ ಇದೆ. ಶೀತ, ಕೆಮ್ಮು, ಕಫ ಎಲ್ಲವನ್ನೂ ದೂರ ಮಾಡುವ ಶಕ್ತಿ ಈ ಒಣದ್ರಾಕ್ಷಿಗೆ ಇದೆ. ಇದರ ಜೊತೆಗೆ ಸೌಂದರ್ಯ ವೃದ್ಧಿಯನ್ನು ಸಹ ಇದು ಮಾಡುತ್ತದೆ.

ಒಣದ್ರಾಕ್ಷಿಯಲ್ಲಿ ಪ್ರೊಟೀನ್, ವಿಟಮಿನ್ನುಗಳು ಹೆಚ್ಚಿರುವುದರಿಂದ ತುಂಬಾ ಸಣ್ಣ ಇರುವವರು ತೆಗೆದುಕೊಳ್ಳಬಹುದು.ಕ್ರೀಡಾಪಟುಗಳು ತಮ್ಮ ಬಲ ವೃದ್ಧಿಸಿಕೊಳ್ಳಲು ಒಣದ್ರಾಕ್ಷಿ ತಿನ್ನುವುದು ಉತ್ತಮ.ಇವುಗಳಲ್ಲಿನ ಕೊಲೆಸ್ಟರಾಲ್, ವಿಟಮಿನ್ನುಗಳು ಮುಂತಾದವು ಪೋಷಕಾಂಶಗಳನ್ನು ಒದಗಿಸಿ ರೋಗ ನಿರೋಧಕ ಶಕ್ತಿ ನೀಡುತ್ತವೆ.

ಒಣದ್ರಾಕ್ಷಿಯಲ್ಲಿನ ಯಾಂಟೀಯಾಕ್ಸಿಡೆಂಟ್’ಗಳು ಕ್ಯಾನ್ಸರ್ ಕಣಗಳನ್ನು ದೂರ ಮಾಡುತ್ತವೆ. ಹೈಬಿಪಿಯನ್ನು ನಿವಾರಿಸುತ್ತದೆ.ಇವುಗಳಲ್ಲಿನ ಪೊಟಾಸಿಯಂ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವಾಗಿರಿಸುತ್ತದೆ.ಒಣದ್ರಾಕ್ಷಿಯಲ್ಲಿನ ವಿಟಮಿನ್ ಬಿ ಕಾಂಪ್ಲೆಕ್ಸ್, ಕಬ್ಬಿಣ ಇರುವುದರಿಂದ ರಕ್ತಕಣಗಳ ಉತ್ಪಾದನೆಗೆ ತುಂಬಾ ಸಹಾಯಕವಾಗಿವೆ.

ಇನ್ನು ವೈರಸ್,ಫಂಗಸ್ನ ವಿರುದ್ಧ ಕೂಡ ಇದು ದೇಹಕ್ಕೆ ರಕ್ಷಣೆ ನೀಡಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಭರಿತವಾಗುತ್ತವೆ.

ಪ್ರಕೃತಿ ದತ್ತವಾಗಿ ದೊರೆಯುವ ಯಾವುದೇ ಹಣ್ಣು- ಹಂಪಲುಗಳನ್ನು ತಿಂದರೂ ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆ ಎಂಬ ಮಾತನ್ನು ವೈದ್ಯಲೋಕದಲ್ಲಿ ಕೇಳಿ ಬರುತ್ತದೆ. ಇದನ್ನು ನಾವು ಕೇಳಿದ್ದೇವೆ, ನೀವೂ ಕೇಳಿರುತ್ತೀರಿ.

ಪ್ರಕೃತಿ ನಮಗೆ ದಯಪಾಲಿಸುವ ಹಣ್ಣು- ಹಂಪಲುಗಳನ್ನು ಯಥವತ್ತಾಗಿ ಸೇವಿಸಲೂ ಬಹುದು ಅಥವಾ ಪೇಯಗಳನ್ನು ತಯಾರಿಸಿಕೊಂಡೂ ಸೇವಿಸಬಹುದಾಗಿದೆ.ಎಚ್ಚರ ವಹಿಸಬೇಕಾದ್ದೇನೆಂದರೆ,

ಯಾವುದೇ ಹಣ್ಣು- ಹಂಪಲುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿದೆಯೇ ಇಲ್ಲವೇ ಎಂಬುದನ್ನು ಗಮನಿಸುವುದು ಒಳ್ಳೆಯದು.ಹಣ್ಣಾಗುವ ಅವಧಿಗೆ ಮೊದಲೇ ಗಿಡಮರಗಳಿಂದ ಕಿತ್ತು ಅವುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ, ಬಲಾತ್ಕಾರದಿಂದ ಹಣ್ಣಾಗುವಂತೆ ಮಾಡಿದ್ದರೆ,ಅಂತಹ ಹಣ್ಣುಗಳು ಆರೋಗ್ಯಕ್ಕೆ ಹಾನಿಕರ.

ಅವು ಹಸಿಯಾಗಿದ್ದರೂ ಸರಿಯೇ, ಒಣಗಿದ್ದರೂ ಸರಿಯೇ, ರಸಾಯನಿಕಗಳ ಲೇಪನ ಅಥವಾ ಸಿಂಪಡಿಕೆ ಇರಬಾರದು.ಉದಾಹರಣೆಗೆ ಒಣದ್ರಾಕ್ಷಿಯನ್ನೇ ತೆಗೆದುಕೊಳ್ಳಿ. ಒಮ್ಮೊಮ್ಮೆ ತುಂಬಾ ಹೊಳಪು ಇರುವ ದ್ರಾಕ್ಷಿ ಸಿಗಲಿದೆ.

ಆದರೆ ಹೊಳಪು ಬರಲಿಕ್ಕೆ ಕೃತಕ ರಸಾಯನಿಕಗಳನ್ನು ಬಳಸಿರುವ ಸಾಧ್ಯತೆಗಳಿರುತ್ತವೆ.ಇದೀಗ ಒಣದ್ರಾಕ್ಷಿಯಿಂದಾಗುವ ಪ್ರಯೋಜನ ಕುರಿತು ಹೇಳಬೇಕೆನಿಸಿದೆ.ಒಣದ್ರಾಕ್ಷಿಯನ್ನು ಸಿಹಿ ತಿಂಡಿಯ ರುಚಿ ಹಾಗೂ ಸೊಗಡನ್ನು ಹೆಚ್ಚಿಸುವ ಪದಾರ್ಥವೆಂದೇ ಬಹುತೇಕ ಮಂದಿ ಪರಿಗಣಿಸಿದ್ದಾರೆ.ಆದರೆ,ಅದು ನಮ್ಮ ಆರೋಗ್ಯ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆಂಬುದು ಕುತೂಹಲಕಾರಿ ವಿಷಯ.

ಒಣದ್ರಾಕ್ಷಿ ನೆನೆಸಿದ ನೀರು ಆರೋಗ್ಯದಾಯಕ.ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ, ನಂತರ ಆ ನೀರನ್ನು ಕುಡಿದರೆ, ಲಿವರ್ ಅಥವಾ ಯಕೃತ್ತಿನ ಆರೋಗ್ಯ ಸುಧಾರಣೆಯಾಗುತ್ತದೆ.

ಈ ನೀರಿಗೆ ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಸೇರ್ಪಡೆಯಾಗುವುದರಿಂದ ಔಷಧೀಯ ಗುಣಗಳನ್ನು ಹೊಂದಿರುತ್ತದೆ.ಒಣದ್ರಾಕ್ಷಿ ನೆನೆಸಿದ ನೀರನ್ನು ಸೇವಿಸಲು ಆರಂಭಿಸಲು ಪ್ರಾರಂಭಿಸಿದ ನಾಲ್ಕೈದು ದಿನಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳ್ಳುವುದನ್ನು ಗಮನಿಸಬಹುದು.ಮಾತ್ರವಲ್ಲದೆ, ದಿನದ ಚಟುವಟಿಕೆಗಳು ಹೆಚ್ಚು ಉಲ್ಲಾಸದಾಯಕವಾಗಿರುತ್ತದೆ.ಈ ನೀರಿನಿಂದ ನಮ್ಮ ದೇಹದ ಮೇಲೆ ಹಲವು ಉತ್ತಮ ಪರಿಣಾಮಗಳು ಬೀರಲಿವೆ.

ಪೇಯ ತಯಾರಿಕೆ

ಎರಡು ಲೋಟ ನೀರು ಹಾಗೂ 8 ರಿಂದ 10 ಒಣದ್ರಾಕ್ಷಿಯನ್ನು ಬಳಸಿಕೊಂಡು ಪೇಯ ತಯಾರಿಸಬಹುದು. ಮೊದಲಿಗೆ ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆಯಬೇಕು.
ನೀರನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಬೇಕು,ನೀರು ಕುದಿಯಲು ಆರಂಭಿಸುತ್ತಿದ್ದಂತೆ ಒಣದ್ರಾಕ್ಷಿಯನ್ನು ಹಾಕಿ ಕುದಿಸಬೇಕು,

ಆ ನಂತರ, ನೀರನ್ನು ತಣ್ಣಗೆ ಮಾಡಿ, ಇಡೀ ರಾತ್ರಿಯಿಡಬೇಕು.ಮರುದಿನ ಬೆಳಿಗ್ಗೆ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಬೇಕು.ನಂತರ ಆ ನೀರನ್ನು ಉಗುರು ಬೆಚ್ಚಗಾಗುವಂತೆ ಮತ್ತೊಮ್ಮೆ ಕಾಯಿಸಿ, ಕುಡಿದರೆ ಒಳ್ಳೆಯದು.ಬೆಳಗಿನ ವೇಳೆ ಖಾಲಿ ಹೊಟ್ಟೆಗೆ ಈ ನೀರನ್ನು ಕುಡಿಯಬೇಕು.

ಆದಾದ ನಂತರ ಸುಮಾರು ಅರ್ಧಗಂಟೆ ಕಾಲ,ಏನನ್ನು ಸೇವಿಸಬಾರದು, ಆ ಬಳಿಕ ನಿತ್ಯದ ಉಪಹಾರ ಸೇವಿಸಬಹುದು.ಇದೇ ವಿಧಾನವನ್ನು ಕೆಲವು ದಿನ ಪಾಲಿಸಬೇಕು. ಸುಮಾರು ಎರಡು ತಿಂಗಳ ಬಳಿಕ ನಿಮ್ಮ ಆರೋಗ್ಯದಲ್ಲಿ, ವಿಶೇಷವಾಗಿ ಯಕೃತ್ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಕಾಣಬಹುದು.

LEAVE A REPLY

Please enter your comment!
Please enter your name here