ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ಜೇನುತುಪ್ಪ, ಅರ್ಧ ಚಮಚ ನಿಂಬೆರಸ ಹಾಕಿ ಕುಡಿಯುವುದರಿಂದ ತೆಳ್ಳಗಾಗಬಹುದು ಎಂಬ ಸಲಹೆಯನ್ನು ಕೇಳಿರುತ್ತೀರಿ.

ಈ ರೀತಿ ಕುಡಿಯುವುದರಿಂದ ತೆಳ್ಳಗಾಗುವುದರ ಜೊತೆ ಮತ್ತೆ ಹಲವು ಪ್ರಯೋಜನಗಳನ್ನು ಪಡೆಯಬಹುದು.ಅವು ಯಾವುವು ಎಂದು ತಿಳಿಯಲು ಮುಂದೆ ಓದಿ.

 

ಲಿವರ್ ಶುದ್ಧ ಮಾಡುತ್ತದೆ: ಲಿವರ್‌ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ನಿಂಬೆ ಮತ್ತು ಜೇನುತುಪ್ಪ ಲಿವರ್‌ನಲ್ಲಿರುವ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

 

ನೀರಿನೊಂದಿಗೆ ನಿಂಬೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ ಸೇವಿಸುವುದರಿಂದ ಆಮಶಂಕೆಯಿಂದ ಉಂಟಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ

ಒಂದು ಟೀ ಚಮಚ ನಿಂಬೆ ರಸಕ್ಕೆ, ಈರುಳ್ಳಿ ರಸ ಸೇರಿಸಿ ಸೇವಿಸುವುದರಿಂದ ಮಲೇರಿಯಾ, ಚಳಿ ಜ್ವರ ನಿವಾರಣೆಯಾಗುತ್ತದೆ.

 

ಬೊಜ್ಜು ಕಡಿಮೆ ಮಾಡುತ್ತೆ: ಬೊಜ್ಜು ಕಡಿಮೆ ಮಾಡುವಲ್ಲಿ ಈ ಪಾನೀಯ ತುಂಬಾ ಸಹಾಯಕಾರಿ.

 

ವಿಟಮಿನ್ಸ್ ಮತ್ತು ಖನಿಜಂಶ: ಈ ಪಾನೀಯಾದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ರಂಜಕ ಅಂಶವಿರುವುದರಿಂದ ದೇಹದಲ್ಲಿ ಈ ಖನಿಜಾಂಶಗಳ ಕೊರತೆ ಉಂಟಾಗದಂತೆ ಆರೋಗ್ಯ ಕಾಪಾಡುತ್ತದೆ.

ಈ ಮಿಶ್ರಣವು ದೇಹಕ್ಕೆ ಋಣಾತ್ಮಕ ಪರಿಣಾಮ ಬೀರುವುದರಿಂದ ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ದೇಹದ ಅಂಗಾಂಗಗಳು ಹೆಚ್ಚು ಶಕ್ತಿಯುತವಾಗಿ ಕೆಲಸ ನಿರ್ವಹಿಸುತ್ತವೆ. ಇದರಿಂದ ಮನಸ್ಸು ಯಾವುದೇ ತೊಂದರೆಗೆ ಒಳಗಾಗದೆ ಹೆಚ್ಚು ಉತ್ಸಾಹದಲ್ಲಿರುತ್ತದೆ.

ನಿಂಬೆಯಲ್ಲಿ ಸಿ ಜೀವಸತ್ವ ಹೆಚ್ಚಿರುತ್ತದೆ. ಇದು ದೇಹಕ್ಕೆ ಉಂಟಾಗುವ ಶೀತ, ಉರಿಯೂತಗಳಂತಹ ಸಮಸ್ಯೆಯನ್ನು ಪರಿಹರಿಸುತ್ತದೆ.

ಈ ಮಿಶ್ರಣವು ಪೊಟ್ಯಾಶಿಯಂನೊಂದಿಗೆ ಪುಷ್ಟೀಕರಿಸಿ ಮೆದುಳು ಮತ್ತು ನರ ವ್ಯವಸ್ಥೆಯ ಕಾರ್ಯ ಚಟುವಟಿಕೆಗೆ ಸಹಾಯ ಮಾಡುವುದು.ದೇಹಕ್ಕೆ ಅಂಟಿಕೊಳ್ಳುವ ಚಿಕ್ಕ ಪುಟ್ಟ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಗಮನಿಸಿ : ಆದರೆ ನೆನಪಿಡಿ ದಿನದಲ್ಲಿ ಒಂದು ಲೋಟಕ್ಕಿಂತ ಅಧಿಕ ಕುಡಿಯುವ ಸಾಹಸ ಬೇಡ. ಅತಿಯಾದರೆ ಅಮೃತವೂ ವಿಷವಾದೀತು ಜೋಕೆ!

LEAVE A REPLY

Please enter your comment!
Please enter your name here