ಬೆಳಿಗ್ಗೆ ಬೇಗ ಏಳುವುದರಿಂದ ಆಗುವ ಲಾಭಗಳೇನು ಗೊತ್ತೇ?

0
320

ಬೇಗ ಏಳುವ ಅಭ್ಯಾಸ ಮಾಡಿಕೊಂಡರೆ ನಮ್ಮ ದೇಹಕ್ಕೆ ಸಿಗುವ ಲಾಭಗಳು ಹಲವಾರು. ಮುಂಜಾನೆ ವಾತಾವರಣ ಶುದ್ಧವಾಗಿರುತ್ತದೆ. ಶುದ್ಧವಾದ ಗಾಳಿ ಸೇವಿಸಿಕೊಂಡು ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ.ಬೆಳಿಗ್ಗೆ ಬೇಗ ಏಳುವುದರಿಂದ ಮನಸು ಲವಲವಿಕೆಯಿಂದ ಕೂಡಿರುತ್ತದೆ.

ಈ ಸಂದರ್ಭದಲ್ಲಿ ವಾತಾವರಣ ಪ್ರಶಾಂತವಾಗಿರುವುದರಿಂದ ಏಕಾಗ್ರತೆಯೂ ಹೆಚ್ಚುತ್ತದೆ. ಮೆದುಳಿನ ನರಮಂಡಲಕ್ಕೆ ವೇಗವಾಗಿ ರಕ್ತ ಸಂಚಾರವಾಗಿ, ಚುರುಕಾಗಿ ಕೆಲಸ ಮಾಡುವುದಲ್ಲದೆ, ನೆನಪಿನ ಶಕ್ತಿ ಹೆಚ್ಚುತ್ತದೆ.ಬೆಳಿಗ್ಗೆ ಬೇಗ ಏಳುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಹತೋಟಿಯಲ್ಲಿರುತ್ತದೆ.

ಮುಂಜಾನೆಯ ಸೂರ್ಯನ ಕಿರಣ ಬಿದ್ದಾಗ ಮರ ಗಿಡಗಳಿಂದ ಹೊರಹೊಮ್ಮುವ ಆಮ್ಲಜನಕದ ಸೇವನೆ, ನಮ್ಮ ಹೃದಯ, ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ. ಬೆಳಿಗ್ಗೆ ಬೇಗ ಏಳುವುದರಿಂದ ಋಣಾತ್ಮಕ ಅಂಶಗಳು ಅಥವಾ ಯೋಚನೆಗಳು ಕಡಿಮೆಯಾಗಿ ಧನಾತ್ಮಕ ಅಂಶಗಳು ಹಾಗೂ ಯೋಚನೆಗಳು ಹೆಚ್ಚಾಗುತ್ತವೆ.ಹಾಗಾಗಿಯೇ ನಮ್ಮ ಹಿರಿಯರು ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ಇಟ್ಟುಕೊಂಡಿದ್ದರು.

LEAVE A REPLY

Please enter your comment!
Please enter your name here