ಬೆಳ್ಳುಳ್ಳಿಗೆ ಅನೇಕ ಶತಮಾನಗಳಷ್ಟು ಇತಿಹಾಸವಿದೆ.ಆದರೆ ಮೊಟ್ಟಮೊದಲು ಇದನ್ನು ಯಾವ ದೇಶದಲ್ಲಿ ಬೆಳೆಯಲಾಯಿತೆಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಆದರೂ ಬೆಳ್ಳುಳ್ಳಿಯನ್ನು ಮೊದಲು ದಕ್ಷಿಣ ಯುರೋಪ್‌ನಲ್ಲಿ ಬೆಳಸಲಾಗುತ್ತಿತ್ತು ಎಂಬ ಪ್ರತೀತಿಯಿದೆ.

ಆದರೆ ಬೆಳ್ಳುಳ್ಳಿಯ ಕಟುವಾಸನೆಯ ಕಾರಣದಿಂದ ಕೆಲವು ಜನರು ಅದರ ಸೇವನೆಯಿಂದ ದೂರ ಸರಿಯುತ್ತಾರೆ.ಆದರೆ ಅದು ಸರಿಯಲ್ಲ.ಇದು ಕೆಲವು ಅನಾರೋಗ್ಯಕ್ಕೆ ಉತ್ತಮ ಔಷಧ.ಬೆಳ್ಳುಳ್ಳಿ ಆಹಾರ ಪದಾರ್ಥಗಳ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆರೋಗ್ಯವಾಗಿರಬಹುದು.

ಉಪಯೋಗಗಳು

ಬೆಳ್ಳುಳ್ಳಿಯಲ್ಲಿ ಮಧುಮೇಹ ಹಾಗೂ ಬೊಜ್ಜನ್ನು ನಿಯಂತ್ರಿಸುವ ಶಕ್ತಿಯಿದ್ದು, ಪ್ರತೀ ನಿತ್ಯ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ಡಯಾಬಿಟಿಸ್ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.ಹಸಿವನ್ನು ಹೆಚ್ಚಿಸಲು ಇದು ಸಹಕಾರಿ.

ಬೆಳ್ಳುಳ್ಳಿ ಗಡ್ಡೆಯನ್ನು ಸುಟ್ಟು ಅದರ ಪುಡಿಯನ್ನು ಅರಿಶಿನ ಮತ್ತು ಬೆಣ್ಣೆಯೊಂದಿಗೆ ಕಲಸಿ ಕುರ ಆಗಿರುವ ಜಾಗಕ್ಕೆ ಹಚ್ಚಿದರೆ ಕುರ ವಾಸಿಯಾಗುತ್ತದೆ.ಇದು ದೇಹದ ಉಷ್ಣತೆ ಹೆಚ್ಚಿಸುವುದರಿಂದ ಹೆಚ್ಚು ಬಳಸುವುದು ಒಳೆಯದಲ್ಲ

LEAVE A REPLY

Please enter your comment!
Please enter your name here