ಆರೋಗ್ಯದ ದೃಷ್ಟಿಯಿಂದ ಅನೇಕ ಪ್ರಯೋಜನಗಳನ್ನು ಹೊಂದಿರುವ ಬೇಲದ ಹಣ್ಣು ಮಾರುಕಟ್ಟೆಯಲ್ಲಿ ಕಾಣಸಿಗುವುದು ಬಹಳ ವಿರಳ.ಗುಡ್ಡಗಾಡು ಪ್ರದೇಶಗಳಲ್ಲಿ ಹೊರತುಪಡಿಸಿದರೆ ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ಸಿಗುತ್ತದೆ.

ಆನೆಯ ಅಚ್ಚುಮೆಚ್ಚಿನ ಈ ಹಣ್ಣನ್ನು ಶ್ರೀಲಂಕಾ, ಥಾಯ್ ಲಂಡ್‌ಗಳಲ್ಲಿ  ಜನ ಹೆಚ್ಚು ಬಳಕೆ ಮಾಡುತ್ತಾರೆ.ಮಡಿಕೇರಿ,ಚಿಕ್ಕಮಗಳೂರು ಕಡೆಗಳಲ್ಲಿ ಬೇಲದ ಹಣ್ಣು ಹೆಚ್ಚಾಗಿ ಕಾಣಸಿಗುತ್ತದೆ.

ಬೇಲದ ಹಣ್ಣಿನ ಮರ 30 ಫೀಟ್‌ ಎತ್ತರ ಬೆಳೆಯುತ್ತದೆ.ಹಣ್ಣು 5ರಿಂದ 9 ಸೆಂ.ಮೀ.ಗಾತ್ರದಲ್ಲಿದ್ದು ಉರುಟಾಗಿ ಇರುತ್ತದೆ. ಹಣ್ಣಿನ ಹೊರಭಾಗ ತುಂಬಾ ದಪ್ಪಗಿದ್ದು,ಒಳಭಾಗ ಕಂದುಬಣ್ಣವಿರುತ್ತದೆ.ಅದರಲ್ಲಿ ಚಿಕ್ಕ ಚಿಕ್ಕ ಬೀಜಗಳಿರುತ್ತವೆ.

ಬೇಲದ ಹಣ್ಣಿನ ಔಷಧೀಯ ಗುಣಗಳು
ಬೇಲದ ಹಣ್ಣಿನಲ್ಲಿ ವಿಟಮಿನ್‌ ಸಿ,ಕ್ಯಾಲ್ಸಿಯಂ,ನಾರಿನಂಶವಿರುವುದರಿಂದ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಡಯಾಬಿಟೀಸ್‌ ರೋಗಿಗಳು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.

ಕಿಡ್ನಿ,ಲಿವರ್‌ನ ಆರೋಗ್ಯ ಹೆಚ್ಚಿಸುವಲ್ಲಿ ಈ ಹಣ್ಣು ಉತ್ತಮ ಪಾತ್ರ ವಹಿಸುತ್ತದೆ.ಹಣ್ಣಿನ ಲೇಪ ಮಾಡಿ ದೇಹಕ್ಕೆ ಹಚ್ಚುವುದರಿಂದ ಮಲೇರಿಯಾ, ಡೆಂಗ್ಯೂಗಳಂತಹ ಸೊಳ್ಳೆಯಿಂದ ಹರಡುವ ರೋಗಗಳು ಬರುವುದಿಲ್ಲ.

ಹಾವು ಕಚ್ಚಿದ ಜಾಗಕ್ಕೆ ಹಣ್ಣಿನ ಲೇಪ ಮಾಡಿ ಹಚ್ಚಿದರೆ ವಿಷ ಕಡಿಮೆಯಾಗುತ್ತದೆ .ಬೇಲದ ಹಣ್ಣು ಸೇವನೆಯಿಂದ ಮಲಬದ್ಧತೆ,ಅಜೀರ್ಣ,ಅಲ್ಸರ್‌, ಮೂಲವ್ಯಾಧಿ,ಶ್ವಾಸಕೋಶ ಸಂಬಂಧಿ ತೊಂದರೆ,ಭೇದಿ,ಕ್ರೀಮಿಕೀಟನಾಶಕಗಳಿಂದ ಉಂಟಾಗುವ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.ರಕ್ತಶುದ್ಧಿಗೊಳ್ಳುತ್ತದೆ.ಅಲ್ಲದೆ ಕ್ಯಾನ್ಸರ್‌ ತಡೆಯುವಲ್ಲಿ ಈ ಹಣ್ಣು ಮಹತ್ವದ ಪಾತ್ರ ವಹಿಸುತ್ತದೆ.

ಬೇಲದ ಹಣ್ಣಿನ ಜ್ಯೂಸ್‌, ಜಾಮ್‌
ಬೇಲದ ಹಣ್ಣಿನಿಂದ ಮಿಲ್ಕ್ ಶೇಕ್‌,ಜ್ಯೂಸ್‌ ಹಾಗೂ ಜಾಮ್‌ ಮಾಡಲಾಗುತ್ತದೆ.ಇದು ಸಿಹಿಯಾಗಿ ಬಹಳ ರುಚಿಯಾಗಿರುವುದರಿಂದ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರಿಗೂ ಇಷ್ಟವಾಗುತ್ತದೆ.ಬೇಲದ ಹಣ್ಣು ಚೆನ್ನಾಗಿ ಮಾಗಿದ ಬಳಿಕ ಸಕ್ಕರೆ,ಜೇನುತುಪ್ಪ ಸೇರಿಸಿ ತಿಂದರೆ ರುಚಿ ಇನ್ನೂ ಹೆಚ್ಚುತ್ತದೆ.

ಆರೋಗ್ಯಕ್ಕೆ ಒಳ್ಳೆಯದು
ನಮಗೆ ಬೇಕೆಂದಾಗ ಸಿಗದ, ವಿರಳವಾಗಿ ಕಾಣಸಿಗುವ ಬೇಲದ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದೆ.  ಹಲವು ರೋಗಗಳಿಗೆ ಇದು ರಾಮಬಾಣ. ಸಾಧ್ಯವಾದಷ್ಟು ಈ ಹಣ್ಣಿನ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ. ನಾರಿನಂಶ ಹೆಚ್ಚು ಇರುವುದರಿಂದ  ಡಯಾಬಿಟೀಸ್‌ ರೋಗಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

(ಸಂಗ್ರಹ)

LEAVE A REPLY

Please enter your comment!
Please enter your name here