ಬೇವು ಕಹಿಯಾದರೂ ಇದರ ಉಪಯೋಗಗಳು ಆರೋಗ್ಯಕ್ಕೆ ಸಿಹಿ…ಹೇಗೆ? ಓದಿ ಇದನ್ನು

0
1111

ದೊಡ್ಡಮರ.ಹಳ್ಳಿಗಳ ಊರ ಮುಂದಿನ ಕಟ್ಟೆಗಳಲ್ಲಿ ಸಾಮಾನ್ಯವಾಗಿ ಬೆಳೆಸುತ್ತಾರೆ. ಫೆಬ್ರವರಿ, ಎಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತದೆ.ಸಾಲು ಮರಗಳಾಗಿ ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಎದುರು ಬದಿರಾಗಿ ಇರುವುವು. ಹೂಗಳು ಚಿಕ್ಕವು ಮತ್ತು ಬೆಳ್ಳಗಿರುತ್ತವೆ.ಕಾಯಿಗಳು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣವನ್ನು ಹೊಂದುತ್ತವೆ.

ಬೇವಿನ ಔಷದೀಯ ಉಪಯೋಗಗಳು…

ಕಹಿ ಬೇವಿನ ಎಲೆ ಮತ್ತು ನಿಂಬೆ ರಸದ ಪೇಸ್ಟ್
ಮೊಡವೆ ಕಡಿಮೆಯಾಗುತ್ತಾ ಬರುವಾಗ ಕಹಿ ಬೇವಿನ ಎಲೆಯ ಪೇಸ್ಟ್ ಗೆ ನಿಂಬೆ ರಸ ಹಿಂಡಿ ಮುಖಕ್ಕೆ ಹಚ್ಚಿದರೆ ಕಲೆಯೂ ಕಡಿಮೆಯಾಗುವುದು.

ಬೇವಿನಲ್ಲಿ ಕ್ರಿಮಿನಾಶಕ ಗುಣವಿದೆ. ಆದುದರಿಂದ ಹಲ್ಲುಜ್ಜಲು ಉಪಯುಕ್ತ.ಕಡ್ಡಿಯಲ್ಲಿ ಹಲ್ಲುಜ್ಜುವುದರಿಂದ ಬಾಯಿಯ ದುರ್ಗಂಧ ಹೋಗುವುದು.

ಒಂದು ಹಿಡಿ ಹಸಿ ಬೇವಿನ ಸೊಪ್ಪನ್ನು ತಂದು ಕಲ್ಪತ್ತಿನಲ್ಲಿ ಹಾಕಿ ಹಾಲು ಸೇರಿಸಿ ನುಣ್ಣಗೆ ಅರೆಯಿರಿ ಮತ್ತು ಮಲಗುವುದಕ್ಕೆ ಮುಂಚೆ ಎರಡೂ ಅಂಗಾಲುಗಳಿಗೆ ಲೇಪಿಸಿ ತಿಕ್ಕಿರಿ.

ಕಡಲೆ ಹಿಟ್ಟು, ಮೊಸರು, ಕಹಿ ಬೇವಿನ ಎಲೆ ಈ ಮೂರನ್ನು ಮಿಶ್ರ ಮಾಡಿ ಇಡೀ ಮೈಗೆ ಹಚ್ಚುವುದರಿಂದ ಮೈ ಹೊಳಪು ಹೆಚ್ಚುವುದು.

ಒಂದು ಹಿಡಿ ಬೇವಿನ ಸೊಪ್ಪನ್ನು ಕಲ್ಪತ್ತಿನಲ್ಲಿ ಹಾಕಿ ನೀರು ಸೇರಿಸಿ ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ರಸ ತೆಗೆದು ಸ್ವಲ್ಪ ಕೆಂಪು ಕಲ್ಲುಸಕ್ಕರೆ ಸೇರಿಸಿ, ಸೇವಿಸಿರಿ. ಹೊತ್ತಿಗೆ ಎರಡು ಟೀ ಚಮಚ ರಸ ಸಾಕು.

ಬೇವಿನ ಚೆಕ್ಕೆಯ ಕಷಾಯದಲ್ಲಿ ಶಾಜೀರಿಗೆ(ಕಹಿ ಜೀರಿಗೆ) ಚೂರ್ಣ ¼ ಟೀ ಚಮಚ ಸೇರಿಸಿ ಸ್ವಲ್ಪ ಜೇನು ಸೇರಿಸಿ ಕುಡಿಸುವುದು.ಬೇವಿನ ಎಣ್ಣೆಯನ್ನು ಹಳ್ಳಗಳಲ್ಲಿ ನಿಂತಿರುವ ನೀರಿಗೆ ಹಾಕುವುದು.ಸೊಳ್ಳೆಗಳು ಸಾಯುವುವು.ಸೊಳ್ಳೆಗಳ ಮೊಟ್ಟೆ ಮರಿಗಳು ನಾಶವಾಗುವುವು.

ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿ,ಆ ನೀರನ್ನು ಬಳಸುವುದು ಕೂಡ ಒಳ್ಳೆಯದು.ಅಕ್ಕಿಯನ್ನು ಇಡುವ ಜಾಗದಲ್ಲಿ ಬೇವಿನ ಎಲೆ ಇಟ್ಟರೆ ಅಲ್ಲಿ ಅಕ್ಕಿಯೂ ಹುಳ ಬರುವುದಿಲ್ಲ.ಬೇವಿನ ಎಲೆಗಳನ್ನು ಸುಟ್ಟು ಮನೆಗೆ ಹೋಗೆ ಆಡಿಸಿದರೆ ಸೊಳ್ಳೆಗಳು ಬರುವುದಿಲ್ಲ.

ಬೇವಿನ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿ ಚೆನ್ನಾಗಿ ತಿಕ್ಕಿರಿ. ಕೈಕಾಲು ತಣ್ಣಗಿರುವಾಗ ಈ ಚಿಕಿತ್ಸೆಯನ್ನು ಒಂದೆರಡು ತಾಸು ಮುಂದುವರೆಸುವುದು. ಬೇವಿನ ಎಣ್ಣೆಯನ್ನು ವಿಳೇದೆಲೆಗೆ ಹಚ್ಚಿ ತಿನ್ನುವುದರಿಂದ ಸಹ ಅನುಕೂಲವಾಗುವುದು.

LEAVE A REPLY

Please enter your comment!
Please enter your name here