ಇತ್ತೀಚಿಗೆ ಮೊಬೈಲ್ ಗಳಿಂದ ಎಷ್ಟು ತೊಂದರೆ ಆಗುತ್ತಿದೆ ಅಂದರೆ ಹಲವಾರು ಮೊಬೈಲುಗಳು ಸ್ಪೋಟಗೊಂಡ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇದ್ದೇವೆ. ಇದು ನಾವು ಅತಿಯಾಗಿ ಬಳಸುವ ಸಲುವಾಗಿಯೋ ಅಥವಾ ಮೊಬೈಲ್ ಗಳದ್ದೇ ತೊಂದರೆಯೋ ಗೊತ್ತಾಗ್ತಿಲ್ಲ.

ಮತ್ತೆ ಇದೀಗ ಮೊಬೈಲ್ ಒಂದು ಬ್ಲಾಸ್ಟ್ ಆಗಿದ್ದು ಹುಡುಗಿ ಒಬ್ಬಳ ಜೀವವನ್ನು ಬಳಿ ತೆಗೆದುಕೊಂಡಿದೆ,ಅಷ್ಟಕ್ಕೂ ಯಾವ್ ಕಂಪನಿ ಮೊಬೈಲ್ ಅದು ಮತ್ತು ಹೇಗೆ ಸ್ಫೋಟ ಆಯಿತು ಗೊತ್ತೇ ನೋಡಿ.

ಯಾವ ಮೊಬೈಲ್?

ನೀವು ರೆಡ್ಮಿ ಅಂತ ತಿಳಿದಿದ್ದರೆ ತಪ್ಪು,ಸ್ಫೋಟ ಆಗಿರುವ ಮೊಬೈಲ್ ಪ್ರತಿಷ್ಠಿತ ನೋಕಿಯಾ ಕಂಪನಿಯ 5233 ಮಾಡೆಲ್ ಫೋನ್.ಈ ಮುಂಚೆ ನೋಕಿಯಾ ಕಂಪನಿಗೆ ಸಂಬಂಧಪಟ್ಟ ಮೊಬೈಲ್ ಬಗ್ಗೆ ಈ ತರದ ಸುದ್ದಿ ಕೇಳಿಲ್ಲವಾದರೂ ಇನ್ನು ಮೇಲೆ ಎಚ್ಚರಿಕೆ ವಹಿಸಬೇಕಾಗಿದೆ.

ಯಾಕೆ ಬ್ಲಾಸ್ಟ್ ಆಗಿದ್ದು?

ಹದಿನೆಂಟು ವರ್ಷದ ಹೆಣ್ಣು ಮಗಳೊಬ್ಬಳು ತಮ್ಮ ಸಂಬಂದಿಕರ ಜೊತೆ ಮೊಬೈಲ್ ಚಾರ್ಜ್ ಆಗೋವಾಗಲೇ ಮಾತಾಡ್ತಿದ್ದರಿಂದ ಮೊಬೈಲ್ ಸ್ಪೋಟಗೊಂಡಿದೆ.ಕಿವಿಯಲ್ಲೇ ಇಟ್ಟ್ಕೊಂಡು ಮಾತನಾಡುವ ವೇಳೆ ಮೊಬೈಲ್ ಭಯಾನಕವಾಗಿ ಸ್ಫೋಟಗೊಂಡಿದ್ದು ಹುಡುಗಿ ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾಳೆ.

ಎಲ್ಲಿ ಗೊತ್ತಾ ನಡೆದದ್ದು?

ಈ ಘಟನೆ ನಿನ್ನೆ ಒರಿಸ್ಸಾದಲ್ಲಿ ನಡೆದದ್ದು,ಚಾರ್ಜ್ ಮಾಡೋವಾಗಲೇ ಮೊಬೈಲ್ ಅಲ್ಲಿ ಕಾಲ್ ಮಾಡಿ ಮಾತಾಡ್ತಿರೋದ್ರಿಂದಲೇ ಮೊಬೈಲ್ ಸ್ಫೋಟ ಆಗಿದೆ ಎಂದು ಮೂಲಗಳು ಹೇಳಿವೆ. ಬ್ಲಾಸ್ಟ್ ಆದ ತಕ್ಷಣ ಮೂರ್ಛೆ ಹೋಗಿ ಬಿದ್ದ ಹುಡುಗಿಯನ್ನು ಅಣ್ಣ ಆಸ್ಪತ್ರೆಗೆ ಸೇರಿಸಿದನಾದರೂ ಹುಡುಗಿ ಆಗಲೇ ಅಸುನೀಗಿದ್ದಳು.

ಈ ಘಟನೆ ಬಗ್ಗೆ ಪ್ರತಿಕ್ರಿಸಿರುವ ನೋಕಿಯಾ ಕಂಪನಿ ಈ ಘಟನೆ ಅತ್ಯಂತ ದುಃಖ್ಖ ತಂದಿದೆ ಮತ್ತು ಇದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಆದರಿಂದ ಮೊಬೈಲ್ ಅನ್ನು ಚಾರ್ಗಿಂಗ್ ಅಲ್ಲಿ ಇಟ್ಟು ಯಾವತ್ತೂ ಮಾತನಾಡುವ ಅಥವಾ ಮೊಬೈಲ್ ಬಳಸುವ ದುಸ್ಸಾಹಸಕ್ಕೆ ಹೋಗಲೇಬೇಡಿ.

ಮತ್ತೊಂದು ಐಫೋನ್ ಸ್ಫೋಟ:

ಇದುವರೆಗೂ ಚೈನಾ ತಯಾರಿಕಾ ಸಂಸ್ಥೆಯ ಮೊಬೈಲ್’ಗಳು ಸ್ಫೋಟಗೊಂಡಿದ್ದನ್ನು ಕೇಳಿದ್ದೆವು. ಆದರೆ ಇದೇ ಮೊದಲ ಬಾರಿಗೆ ಐಫೋನ್ ಕೂಡಾ ಸ್ಫೋಟಗೊಂಡಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಐಫೋನ್ ಬ್ಯಾಟರಿ ಬಿಸಿ ಹೆಚ್ಚಾಗಿ ಬ್ಲಾಸ್ಟ್ ಆಗಿದ್ದು, ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಜೂರಿಚ್’ನ ಆಯಪಲ್ ಐಫೋನ್ ಸ್ಟೋರ್’ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜೂರಿಚ್’ನ ಬೆನ್‌ಆಪ್’ಸ್ಟ್ರೆಸ್’ನ ಆಯಪಲ್ ಸ್ಟೋರ್’ನಲ್ಲಿ ಈ ಅವಘಡ ಸಂಭವಿಸಿದ್ದು, ರಿಪೇರಿ ಮಾಡುವ ವ್ಯಕ್ತಿ ಗಾಯಗೊಂಡಿದ್ದಾನೆ.

ಜೋರಿಚ್ ನಗರ ಪೊಲೀಸರ ಪ್ರಕಾರ, ಐಫೋನ್ ರಿಪೇರಿ ಮಾಡುವಾಗ ಇದ್ದಕ್ಕಿಂದಂತೆ ಸ್ಫೋಟಗೊಂಡಿದೆ. ಈ ವೇಳೆ ಸ್ಟೋರ್’ನಲ್ಲಿದ್ದ 7 ಮಂದಿಗೂ ಚಿಕ್ಕ ಗಾಯಗಳಾಗಿವೆ ಎಂದು ವರದಿಯಾಗಿದೆ.

ಈ ವೇಳೆ ಸ್ಟೋರ್’ನಲ್ಲಿ 50ಕ್ಕೂ ಹೆಚ್ಚು ಮಂದಿ ಗ್ರಾಹಕರು ಹಾಗೂ ಸಿಬ್ಬಂದಿಗಳು ಇದ್ದರು ಎನ್ನಲಾಗಿದೆ. ಈ ಘಟನೆ ಕುರಿತಂತೆ ಜೂರಿಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಅವಘಡದ ಕುರಿತಂತೆ ಆಯಪಲ್ ಸಂಸ್ಥೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

LEAVE A REPLY

Please enter your comment!
Please enter your name here