ಪೈನಾಪಲ್ ಅಥವಾ ಅನಾನಸ್ ಎಂದು ಕರೆಯಲ್ಪಡುವ ಈ ಹಣ್ಣು ನೋಡಲು ವಿಚಿತ್ರವಾಗಿ ಕಂಡುಬಂದರೂ ಅದ್ಭುತ ರುಚಿ ಮತ್ತು ಆರೋಗ್ಯ ವರ್ಧಕ.ಇದರ ಔಷಧೀಯ ಗುಣಗಳ ಪಟ್ಟಿ ಬಲು ದೊಡ್ಡದು.ಅನಾಸನ್ ಅಥವಾ ಪೈನಾಪಲ್‍ನಿಂದ ತಯಾರಿಸಿದ ಶರಬತ್ತು,ಗೊಜ್ಜು, ಸಾರು ನಾಲಿಗೆಗೆ ರುಚಿಯಾಗಿರುತ್ತದೆ.ಈ ಹಣ್ಣಿನ ರಸ ದೇಹಕ್ಕೆ ತಂಪು ನೀಡುತ್ತದೆ.

ಪೈನಾಪಲ್ ಜ್ಯೂಸ್ ಜೀರ್ಣಕಾರಿ ಹೊಟ್ಟೆಯಲ್ಲಾಗುವ ಉರಿ ಮತ್ತು ಸಂಕಟವನ್ನು ಶಮನಗೊಳಿಸುತ್ತದೆ.ಅನಾನಸ್ ಸೇವಿಸುವುದರಿಂದ ಪಚನಕ್ರಿಯೆಗೆ ನೆರವಾಗುತ್ತದೆ.ಪೈನಾಪಲ್ ರಸ ಗಂಟಲು ರೋಗಗಳ ನಿವಾರಣೆಗೆ ವಿಶೇಷ ಗುಣಕಾರಿ.

ಅರಿಶಿಣ ಕಾಮಾಲೆ ರೋಗದಿಂದ ನರಳುವ ರೋಗಿಗಳಿಗೆ ಈ ಹಣ್ಣು ದಿವ್ಯ ಔಷಧಿ.ಮಕ್ಕಳಿಗೆ ಪೈನಾಪಲ್ ನೀಡುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.ಚೆನ್ನಾಗಿ ಮಾಗಿದ ಅನಾನಸ್ ಹಣ್ಣಿನ ರಸ ಸೇವಿಸುವುದರಿಂದ ಹೊಟ್ಟೆಯಲ್ಲಾಗುವು ಉರಿ, ಸಂಕಟ ಶಮನವಾಗುವುದು; ಉರಿಮೂತ್ರ ಗುಣವಾಗುವುದು.

ಮೂತ್ರಕಟ್ಟು ನಿವಾರಣೆಯಾಗುವುದು ಜೀರ್ಣಶಕ್ತಿ ಹೆಚ್ಚುವುದು.ಪ್ರತಿ ದಿನವೂ ಅನಾನಸ್ ಹಣ್ಣಿನ ರಸವನ್ನು ರೋಗಗ್ರಸ್ತ ಚರ್ಮದ ಮೇಲೆ ಲೇಪಿಸುತ್ತಿದ್ದರೆ ಚರ್ಮವ್ಯಾಧಿಗಳಲ್ಲಿ ವಿಶೇಷ ಗುಣ ಕಂಡುಬುರುವುದು.ಉರಿ ಮೂತ್ರದ ಸಮಸ್ಯೆ ಇದ್ದರೆ ಹಣ್ಣಿನ ರಸ ಕುಡಿದರೆ ಉಪಶಮನವಾಗುತ್ತದೆ.

ಅರಿಶಿನ ಕಾಮಾಲೆ ಇದ್ದವರು ಅನಾನಸ್ ಹಣ್ಣಿನ ಹೋಳುಗಳನ್ನು ಜೇನು ತುಪ್ಪದಲ್ಲಿ ನೆನೆಹಾಕಿ ಐದನೇ ದಿನದಿಂದ ದಿನಕ್ಕೆ ಎರಡು ಸಲ ತಿಂದರೆ ಕೆಲವೇ ದಿನಗಳಲ್ಲಿ ಖಾಯಿಲೆ ವಾಸಿಯಾಗುತ್ತದೆ.ಹೊಟ್ಟೆ ತೊಳೆಸುವುದು,ಮೂಲವ್ಯಾಧಿ ಹಾಗೂ ತಲೆಸುತ್ತುವುದು ಇದ್ದರೆ,ಹಣ್ಣಿನ ರಸದ ಜೊತೆ ಕಾಳು ಮೆಣಸಿನ ಪುಡಿ,ಅಡಿಗೆ ಉಪ್ಪು ಬೆರಸಿಕೊಂಡು ಕುಡಿದರೆ ಗುಣವಾಗುವುದು.

LEAVE A REPLY

Please enter your comment!
Please enter your name here