ಭಾರತೀಯರ ದಿನನಿತ್ಯದ ಊಟದಲ್ಲಿ ಮೊಸರಿಗೆ ಸ್ಥಾನ ಇದ್ದೇ ಇರುತ್ತದೆ. ಭಾರತೀಯ ಆಹಾರಪದ್ಧತಿಯಲ್ಲಿ ಮೊಸರು ಅವಿಭಾಜ್ಯ ಅಂಗ. ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತೇ ಮೊಸರಿನ ಮಹತ್ವವನ್ನ ಸಾರಿ ಹೇಳುತ್ತದೆ.ಮೊಸರಿನಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತೇ..? ಓದಿ ಮುಂದೆ…

ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶವಿದೆ.ಕೇವಲ ಆರೋಗ್ಯಕ್ಕೆ ಮಾತ್ರವಲ್ಲ,ಮೊಸರನ್ನು ಸೌಂದರ್ಯ ವೃದ್ಧಿಗೂ ಬಳಸಲಾಗುತ್ತೆ.

ಆಯುರ್ವೇದದ ಪ್ರಕಾರ ರಾತ್ರಿಹೊತ್ತು ಮೊಸರು ಸೇವಿಸಬಾರದು ಎಂಬ ಮಾತಿದೆ. ಮೊಸರನ್ನು ತಾಜಾ ಇದ್ದಾಗಲೇ ಸೇವಿಸಿದರೆ ಮೊಸರಿನ ಸಂಪೂರ್ಣ ಉಪಯೋಗವನ್ನು ಪಡೆಯಬಹುದು.

ಸಾಮಾನ್ಯವಾಗಿ ಹೊಟ್ಟೆ ಕೆಡದಂತೆ ನೋಡಿಕೊಳ್ಳುತ್ತದೆ.ಹೊಟ್ಟೆ ಕೆಟ್ಟಾಗಲೂ ಶಮನಕಾರಿಯಾಗಿ ಕೆಲಸ ಮಾಡುತ್ತದೆ.

ಕ್ಯಾಲ್ಷಿಯಮ್ ಮತ್ತು ಪ್ರೋಟೀನುಗಳ ಖಣಜ.

ಕುಡಿತದ ಹ್ಯಾಂಗೋವರನ್ನು ಬೇಗನೇ ಹೋಗಿಸುತ್ತದೆ.

ಹೊರಗಿನಿಂದ ಹಚ್ಚುವುದರಿಂದಲೂ, ಕುಡಿಯುವುದರಿಂದಲೂ ಕೂದಲು ಮತ್ತು ಚರ್ಮ ಕಾಂತಿಯುಕ್ತವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಬೇರೆ ಆಹಾರಗಳಿಂದ ವಿಟಮಿನ್ಸ್ ಮತ್ತು ಮಿನರಲ್ಸ್ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ.

ಸುಸ್ತನ್ನು ಹೋಗಿಸಿ,ಮೂಡನ್ನು ಚೇತೋಹಾರಿಯಾಗಿಡುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಬೇರೆ ಆಹಾರಗಳಲ್ಲಿರುವ ಮಿನರಲ್ ಮತ್ತು ಪೋಷಕಾಂಶವನ್ನು ಬೇಗನೆ ಹೀರಿಕೊಳ್ಳಲು ಮೊಸರು ಸೇವನೆ ಅಗತ್ಯ.

ಲ್ಯಾಕ್ಟೋಸ್ ಅಲರ್ಜಿ ಇದ್ದವರಿಗೆ ಇದು ತುಂಬಾ ಸಹಕಾರಿ.ಎಲುಬು ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸಲು ಮೊಸರಿನ ಸೇವನೆ ಅತಿ ಮುಖ್ಯ. ಸಂಧಿವಾತದ ವಿರುದ್ಧ ಹೋರಾಡಲು ಸಹಕಾರಿ.ರಕ್ತದೊತ್ತಡದ ತೊಂದರೆಯನ್ನು ಕಡಿಮೆ ಮಾಡುತ್ತದೆ.

LEAVE A REPLY

Please enter your comment!
Please enter your name here