ಚಪಾತಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ?ಹೆಚ್ಚು ತೂಕ ಇರುವವರು ಅಥವಾ ಅನ್ನ ಊಟ ಮಾಡಿದರೆ ಬೇಗ ಜೀರ್ಣವಾಗುವುದಿಲ್ಲ ಎಂದು ತುಂಬಾ ಜನ ರಾತ್ರಿ ಸಮಯದಲ್ಲಿ ಅನ್ನ ಬದಲಿಗೆ ಚಪಾತಿ ತಿನ್ನುತ್ತಾರೆ.

ಮತ್ತೆ ತಟ್ಟೆ ತುಂಬಾ ಅನ್ನ ತಿನ್ನುವವರಿಗೆ ಎರಡು ಅಥವಾ ಮೂರು ಚಪಾತಿಯಿಂದ ಹೊಟ್ಟೆ ತುಂಬುತ್ತದೆಯೇ…! ಅಂದರೆ ಅನ್ನಕ್ಕಿಂತಲ್ಲೂ ಸಾವಿರ ಪಟ್ಟು ಶರೀರಕ್ಕೆ ಶಕ್ತಿ ಕೊಡುವುದರ ಜೊತೆಗೆ ಅನೇಕ ವಿಷಯಗಳಲ್ಲಿ ಒಳ್ಳೆಯದು ಮಾಡುತ್ತದೆ.

ಮತ್ತೆ ಚಪಾತಿಯಿಂದಾಗುವ ಉಪಯೋಗಗಳನ್ನುಇಲ್ಲಿ ನೋಡಿ…

ಚಪಾತಿಗೆ ಬಳಸುವ ಗೋಧಿಯಲ್ಲಿ ತುಂಬಾ ಕಡಿಮೆ ಕೊಬ್ಬಿನಾಂಶವಿರುತ್ತದೆ.ಇದರಲ್ಲಿ ವಿಟಮಿನ್ ಬಿ, ಇ, ಕಾಪರ್, ಅಯೋಡಿನ್, ಜಿಂಕ್, ಮ್ಯಾಂಗನೀಸ್, ಸಿಲಿಕಾನ್, ಆರ್ಸೆನಿಕ್, ಕ್ಲೋರಿನ್, ಸಲ್ಫರ್, ಪೊಟಾಷಿಯಂ, ಮೆಗ್ನೀಸಿಯಂ, ಕ್ಯಾಲ್ಸಿಯಂನಂತಹ ಖನಿಜಗಳಿವೆ.

ಶರೀರಕ್ಕೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡುತ್ತವೆ.ಚಪಾತಿಯಲ್ಲಿ ಜಿಂಕ್, ಫೈಬರ್, ಇತ್ಯಾದಿ ಮಿನರಲ್ಸ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇವು ಚರ್ಮಕ್ಕೆ ಹೊಳಪನ್ನು ಕೊಡುತ್ತವೆ.ಗೋಧಿಯಲ್ಲಿ ಐರನ್ ಕಂಟೆಂಟ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ.ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಅನ್ನು ಹೆಚ್ಚಳ ಮಾಡುತ್ತದೆ.

ಇನ್ನು ಚಪಾತಿಯಲ್ಲಿ ಸಹಜವಾಗಿರುವ ಫೈಬರ್, ಸೆಲೆನಿಯಮ್ ಕಂಟೆಂಟ್ ಕೆಲವು ತರಹದ ಕ್ಯಾನ್ಸರ್’ಗಳನ್ನು ನಿವಾರಿಸುತ್ತದೆ.ಇದು ಕ್ಯಾನ್ಸರ್’ಗೆ ತುತ್ತಾಗದಂತೆ ಶರೀರವನ್ನು ಕಾಪಾಡುತ್ತವೆ.

ರಕ್ತಹೀನತೆ, ಸ್ತನ ಕ್ಯಾನ್ಸರ್, ಕ್ಷಯರೋಗ, ಸಮಸ್ಯೆಗಳು ಬರದಂತೆ ತಡೆಯಬಹುದಾಗಿದೆ.ಡಯಾಬಿಟಿಸ್ ಇರುವವರಿಗೆ ಚಪಾತಿ ಚನ್ನಾಗಿ ಕೆಲಸ ಮಾಡುತ್ತದೆ.ಚಪಾತಿ ಚರ್ಮ ಸಂರಕ್ಷಣೆಗೆ ಸಹಕಾರಿ.ಜೀರ್ಣಕ್ರಿಯೆಯು ಉತ್ತಮಗೊಳುತ್ತದೆ. ಮುಂದಿನ ದಿನ ಯಾಕ್ಟಿವ್ ಆಗಿರಲು ಸಹಾಯ ಮಾಡುತ್ತದೆ.

(ಸಂಗ್ರಹ)

1 COMMENT

LEAVE A REPLY

Please enter your comment!
Please enter your name here