ಲವಂಗದ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ…

0
761

ಲವಂಗ ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು.ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌಡರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ಕರ್ನಾಟಕದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ನಿಮ್ಮ ಉಪಯೋಗಿಸುವ ಟೂತ್ ಪೇಸ್ಟ್ ನಲ್ಲಿ ಲವಂಗ ಇದೆಯೇ? ಹೌದು. ನಾವು ಬಳಸುವ ಹೆಚ್ಚಿನ ಟೂತ್ ಪೇಸ್ಟ್ ನಲ್ಲಿ ಲವಂಗ ಬಳಕೆಯಾಗುತ್ತದೆ. ಯಾಕೆಂದರೆ ಇದು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಹಲ್ಲು ನೋವಾದಾಗ ಲವಂಗದ ಕಣವನ್ನು ನೋವಿರುವ ಜಾಗಕ್ಕೆ ಇಟ್ಟುಕೊಂಡು ನೋವು ಉಪಶಮನವಾಗುತ್ತದೆ.

ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ.ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ಚಹಾ ಮಾಡಿ ಸೇವಿಸಿ.ಕೆಲವು ಲವಂಗದ ತುಂಡನ್ನು ಬಾಯಿಗೆ ಹಾಕಿ ಜಗಿಯುವುದರಿಂದ ಗಂಟಲು ಬಿಟ್ಟುಕೊಂಡು ಬಿಡದೇ ಕಾಡುವ ಕೆಮ್ಮು ಕಡಿಮೆಯಾಗುವುದು.ಸಾಮಾನ್ಯ ಶೀತಕ್ಕೆ ವೈದ್ಯರ ಬಳಿ ಹೋಗಬೇಕಾಗಿಲ್ಲ. ಹದ ಬಿಸಿ ನೀರಿಗೆ ಲವಂಗದ ಎಣ್ಣೆ ಹಾಕಿಕೊಂಡು ಕುಡಿದರೆ ಸಾಕು.ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ.

LEAVE A REPLY

Please enter your comment!
Please enter your name here