1) ಮೇಕಪ್ ತೆಗೆಯುವುದಕ್ಕೆ
ಹೌದು ಕಣ್ರೀ ನಿಮ್ಮ ಮೇಕಪ್ ತೆಗೆಯುವುದಕ್ಕೆ ಯಾವುದೇ ಆಯಿಲ್ ನ ಅವಶ್ಯಕತೆ ಇಲ್ಲ, ವ್ಯಾಸಲೀನ್ ಅನ್ನು ಹತ್ತಿಯಲ್ಲಿ ತೆಗೆದುಕೊಂಡು ನಿಮ್ಮ ಗಾಢ ಲಿಪ್ಸ್ಟಿಕ್,ಕಾಜಲ್, ಫೌಂಡೇಶನ್ ಕ್ರೀಮ್ಗಳನ್ನು ಸುಲಭವಾಗಿ ತೆಗೆಯಬಹುದು,ಇದರಿಂದ ಚರ್ಮವು ಹೊಳೆಯುತ್ತದೆ.

2) ಸುಗಂಧ ದ್ರವ್ಯದ ಸುವಾಸನೆ ಹೆಚ್ಚು ಹೊತ್ತು ಇರುವಂತೆ ಮಾಡುತ್ತದೆ
ಮಾರುಕಟ್ಟೆಯಲ್ಲಿ ಎಷ್ಟೇ ಲಾಂಗ್ ಲಾಸ್ಟಿಂಗ್ ಪೆರ್ಫ್ಯೂಮ್ಗಳು ಬಂದಿದ್ದರು ಕೂಡ ಅವುಗಳ ಆಯಸ್ಸು ಕಡಿಮೆ ಅವಧಿಯವರೆಗೂ ಮಾತ್ರ ಇರುತ್ತದೆ,ಆದರೆ ಅದು ಹೆಚ್ಚು ಗಂಟೆಗಳ ಕಾಲ ಇರಬೇಕು ಅಂದರೆ ನೀವು ಪೆರ್ಫ್ಯೂಮ್ ಹಾಕಿಕೊಳ್ಳುವ ಜಾಗದಲ್ಲಿ ಅಂದರೆ ಕಿವಿಯ ಹಿಂದೆ ಮಣಿಕಟ್ಟಿನ ಮೇಲೆ ವ್ಯಾಸಲೀನ್ ಅನ್ನು ಸವರಿ ನಂತರ ಪೆರ್ಫ್ಯೂಮ್ ಬಳಸಿ ನೋಡಿ ನಂತರ ನಿಮಗೆ ತಿಳಿಯುತ್ತದೆ

3) ಅಂದವಾದ ಹಣೆಯ ಹುಬ್ಬಿಗೆ
ಯಾರಿಗೆ ಆಗಲಿ ತಮ್ಮ ಹಣೆಯ ಹುಬ್ಬುಗಳು ಕಪ್ಪನೆಯಾಗಿ ದಟ್ಟವಾಗಿ ಇರಬೇಕೆಂಬ ಆಸೆ ಇದ್ದೆ ಇರುತ್ತದೆ,ಇದಕ್ಕೆ ಉತ್ತಮ ಮೆಡಿಶನ್ ಅಂದ್ರೆ ಅದು ವ್ಯಾಸಲೀನ್,ಹೌದು ವ್ಯಾಸಲೀನ್ ಅನ್ನು ದಿನ ರಾತ್ರಿ ಮಲಗುವ ಮುನ್ನ ನಿಮ್ಮ ಹುಬ್ಬುಗಳಿಗೆ ಹಚ್ಚಿ ನೋಡಿ,ಕೆಲವೇ ದಿನಗಳಲ್ಲಿ ನಿಮ್ಮ ಹುಬ್ಬು ನಿಮ್ಮನ್ನ ಅಂದವಾಗಿ ಕಣೋ ತರ ಮಾಡುತ್ತೆ

4) ಡಾರ್ಕ್ ಸರ್ಕಲ್ಸ್ ಮಾಯವಾಗಿಸಲು
ಇತ್ತೀಚಿನ ದಿನಗಲ್ಲಿ ಡಾರ್ಕ್ ಸರ್ಕಲ್ಸ್ ಎಲ್ಲರನ್ನು ಕಾಡುವಂತಹ ಸಮಸ್ಯೆಯಾಗಿದೆ,ಇದನ್ನು ಸರಿಮಾಡುವುದಕ್ಕೆ ಸರಿಯಾದ ಮಾರ್ಗವೆಂದರೆ ಅದು ವ್ಯಾಸಲೀನ್,ರಾತ್ರಿ ಮಲಗುವ ಮುನ್ನ ನಿಮ್ಮ ಕಣ್ಣಿನ ಸುತ್ತ ವ್ಯಾಸಲೀನ್ ಅನ್ನು ಹಚ್ಚಿಕೊಂಡು ಮಲಗಿ, ಕೆಲವೇ ದಿನದಲಿ ಡಾರ್ಕ್ ಸರ್ಕಲ್ಸ್ ನಿಮ್ಮಿಂದ ದೂರವಾಗುತ್ತದೆ

5) ನುಣುಪಾದ ಪಾದಕ್ಕೆ
ನುಣುಪಾದ ಪಾದಕ್ಕೆ ವ್ಯಾಸಲೀನ್ ಒಂದು ಅತ್ಯತ್ತಮ ಮಾರ್ಗ ಒಡೆದಿರುವ ಕಾಲುಗಳು, ಬಿರುಕು ಬಿಟ್ಟಿರುವ ಪಾದಗಳು ಇವುಗಳಿಗೆ ವ್ಯಾಸಲೀನ್ ಒಂದು ರಾಮಬಾಣವಾಗಿದೆ, ಇದನ್ನು ಹಚ್ಚುವುದರಿಂದ ಚರ್ಮದ ಕೆಲವು ಸಮಸ್ಯೆಗಳು ದೂರವಾಗುತ್ತದೆ

6) ನೈಲ್ ಪಾಲಿಶ್ ಮುಚ್ಚಳ ಗಟ್ಟಿಯಾಗಿದ್ದರೆ
ನೈಲ್ ಪೋಲಿಷ್ ಡಬ್ಬ ತುಂಬಾ ದಿನ ತೆಗೆಯದೆ ಇದ್ದರೆ ಅದರ ಮುಚ್ಚಳ ತೆಗೆಯುವುದಕ್ಕೆ ಮತ್ತು ಹಾಕುವುದಕ್ಕೆ ತುಂಡರೆ ಉಂಟು ಮಾಡುತ್ತದೆ, ಆದ್ದರಿಂದ ನೈಲ್ ಪಾಲಿಶ್ ಮುಚ್ಚಳಕ್ಕೆ ವ್ಯಾಸಲೀನ್ ಅನ್ನು ಸವರುವುದರಿಂದ ಈ ತೊಂದರೆ ಇಲ್ಲವಾಗುತ್ತದೆ

7) ಮೃದು ಕೂದಲಿಗೆ
ಒರಟು ಕೂದಲು ನಿಮ್ಮ ಅಂದವನ್ನು ಕಡಿಮೆಗೊಳಿಸುತ್ತಾ ಇದ್ದರೆ ಅದಕ್ಕೆ ವ್ಯಾಸಲೀನ್ ಅನ್ನು ಸವರಿ, ಈ ರೀತಿ ಮಾಡುವುದರಿಂದ ನಿಮ್ಮ ಒರಟು ಕೂದಲು ಮೃದು ಕೂದಲಾಗಿ ಬದಲಾಗುತ್ತದೆ ಹಾಗು ನೀವು ಪದೇ ಪದೇ ಬ್ಯುಟಿಪಾರ್ಲರ್ರಿಗೆ ಹೋಗುವುದನ್ನು ತಪ್ಪಿಸುತ್ತದೆ

8) ಬ್ಯಾಗ್ ಮತ್ತು ಶೂಗೆ ಪಾಲಿಶ್ ಮಾಡಲು
ಬ್ಯಾಗ್ ಅಥವಾ ಶೂ ಬಳಸದೆ ತುಂಬಾ ದಿನವಾದರೆ ಅದು ತನ್ನ ಹೊಳಪನ್ನು ಕಳೆದುಕೊಂಡಿರುತ್ತದೆ, ಆದ್ದರಿಂದ ನಿಮ್ಮ ಶೂ ಅಥವಾ ಬ್ಯಾಗ್ ಮತ್ತೆ ಹೊಳೆಯುವಂತಾಗಬೇಕಾದರೆ ಅದರ ಮೇಲೆ ವ್ಯಾಸಲೀನ್ ನಿಂದ ಪಾಲಿಶ್ ಮಾಡಿ ನಂತರ ನೋಡಿ, ನಿಮ್ಮ ಬ್ಯಾಗ್ ಹಾಗು ಶೂ ಹೊಸದರಂತೆ ಕಾಣಿಸುತ್ತದೆ

9) ಒಡಕು ತುಟಿಗೆ
ನಿಮ್ಮ ಒಡಕು ತುಟಿಗೆ ದಿನ ವ್ಯಾಸಲೀನ್ ಅನ್ನು ಹಚ್ಚುತ್ತಾ ಬಂದರೆ ನಿಮ್ಮ ತುಟಿ ಡ್ರೈ ಆಗುವುದನ್ನು ತಪ್ಪಿಸಿ ಅದು ಒಡೆಯದಂತೆ ಮಾಡುತ್ತದೆ, ಹಾಗು ನಿಮ್ಮನ್ನ ಇನ್ನು ಹೆಚ್ಚು ಅಂದಗಾಣುವಂತೆ ಮಾಡುತ್ತದೆ.

LEAVE A REPLY

Please enter your comment!
Please enter your name here