ಸಪೋಟ ಹಣ್ಣನ್ನು ಸಪೋಟ ಅಥವಾ ಚಿಕ್ಕು ಎಂದು ಕರೆಯುತ್ತಾರೆ.ಸಪೋಟದಲ್ಲಿ ವಿಟಾಮಿನ್ ಎ ಹೇರಳವಾಗಿದೆ.ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.ದೃಷ್ಟಿ ದೋಷಕ್ಕೂ ಇದು ರಾಮಬಾಣವಾಗಿದೆ.

ದೃಷ್ಟಿಶಕ್ತಿಯನ್ನು ಹೆಚ್ಚಿಸುತ್ತದೆ.ಜೀವ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಇಡೀ ದೇಹ ಕ್ಷಮತೆಯನ್ನು ಉಳಿಸಿಕೊಳ್ಳಲು ಸಪೋಟ ಸಹಾಯ ಮಾಡುತ್ತದೆ.ದೇಹದಲ್ಲಿ ಮಾಂಸಖಂಡಗಳ ಬೆಳವಣಿಗೆಗೆ ನೆರವು ನೀಡಿ,ಹೃದಯದ ಕಾರ್ಯಕ್ಷಮತೆ ಹೆಚ್ಚುವಂತೆ ಮಾಡುವುದರ ಜೊತೆಗೆ ದ್ರವ ರೂಪದ ಇಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳುವಲ್ಲಿ ನೆರವು ನೀಡುತ್ತದೆ.

ಇಂತಹ ಪೊಟ್ಯಾಸಿಯಂ ಸಪೋಟದಲ್ಲಿ ಹೇರಳವಾಗಿದೆ.ಇದರಿಂದ ಮೇಲೆ ಹೇಳಿದ ಲಾಭಗಳಲ್ಲದೆ ಜೀವಕೋಶಗಳ ದೈನಂದಿನ ಕೆಲಸವು ಅಡೆತಡೆಗಳಿಲ್ಲದೆ ಸಾಗುವಂತೆ ಮಾಡುತ್ತದೆ.ಸಪೋಟವು ನಾರು ನಾರಾಗಿರುವುದರಿಂದ ಜೀರ್ಣ ಕ್ರಿಯೆಗೆ ಅತ್ಯುತ್ತಮವಾಗಿ ಸಹಕಾರ ನೀಡುತ್ತದೆ.

ತಾಜಾ ಸಪೋಟವನ್ನು ಹಾಗೆಯೇ ತಿಂದರೆ ಜೀರ್ಣಕ್ರಿಯೆಗೆ ಬೇಕಾದ ನಾರಿನಂಶವನ್ನು ದೇಹ ಪಡೆಯಲು ಸಾಧ್ಯವಾಗುತ್ತದೆ.ಮಲಬದ್ಧತೆಯಿಂದ ಬಳಲುವವರಿಗೂ ಇದರಷ್ಟು ಉತ್ತಮ ಹಣ್ಣು ಬೇರೊಂದಿಲ್ಲ.

ಈ ಅಪೂರ್ವ ಹಣ್ಣು ತಕ್ಷಣಕ್ಕೆ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.100 ಗ್ರಾಮ್ ಸಪೋಟವು ತನ್ನಲ್ಲಿರುವ ಕಾರ್ಬೋಹೈಡ್ರೇಟ್ ನಿಂದಾಗಿ ಸುಮಾರು 80 ಕ್ಯಾಲೋರಿ ನೀಡುತ್ತದೆ.ಎನರ್ಜಿಯುತವಾದ ಸಪೋಟ ನಿಮ್ಮ ಆರೋಗ್ಯದಲ್ಲಿ ಪವಾಡವನ್ನೇ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ

LEAVE A REPLY

Please enter your comment!
Please enter your name here