2 ಕಪ್ ಸಾಬಕ್ಕಿಯನ್ನು ೧ಗಂಟೆ ನೀರಲ್ಲಿ ನೆನೆಸಿಡಿ. 4 5 ಚಮಚ ಶೇಂಗಾ ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ.ಒಂದು ಬಾಣಲೆಯಲ್ಲಿ  ಚಮಚ ಎಣ್ಣೆ, ಸಾಸಿವೆಕಾಳು,ಉದ್ದಿನಬೇಳೆ,ಕರಿಬೇವು,2 3 ಹಸಿಮೆಣಸು ಹಾಕಿ ಒಗ್ಗರಣೆ ಮಾಡಿ.

ನಂತರ ನೆನೆಸಿಟ್ಟ ಸಾಬಕ್ಕಿಯಲ್ಲಿ ನೀರು ಬಸಿದು ಒಗ್ಗರಣೆಗೆ ಹಾಕಿ.ಸಣ್ಣ ಉರಿಯಲ್ಲಿ ಸಾಬಕ್ಕಿ ಟ್ರಾನ್ಸಪರೆಂಟ್ ಆಗುವವರೆಗೂ ಬೇಯಿಸಿ.ರುಚಿಗೆ ತಕ್ಕಷ್ಟು ಉಪ್ಪು, 2 3 ಚಮಚ ಸಕ್ಕರೆ, ನಿಂಬೆಹಣ್ಣಿನ ರಸ ಸೇರಿಸಿ. ನಂತರ ಇದಕ್ಕೆ ತೆಂಗಿನತುರಿ,ಹುರಿದ ಶೇಂಗಾಪುಡಿ ಸೇರಿಸಿ. (ಬೇಕಾದಲ್ಲಿ ಒಗ್ಗರಣೆಗೆ ಈರುಳ್ಳಿ ಹಾಕಬಹುದು)

ತಯಾರು ಮಾಡುವ ವಿಧಾನಕ್ಕಾಗಿ ಈ ಕೆಳಗಿನ ವೀಡಿಯೋ ನೋಡಿರಿ…

LEAVE A REPLY

Please enter your comment!
Please enter your name here