ಬಿಸಿಬಿಸಿ ಅಡುಗೆ ಮಾಡಿ ಬಡಿಸುವ ಹೆಂಡತಿ ಊರಿಗೆ ಹೋಗಿರಲಿ, ಬಲವಂತ ಬ್ರಹ್ಮಚರ್ಯವಿರಲಿ,ಒಂಟಿ ರೂಮಿನಲಿ ಒಬ್ಬಂಟಿ ಜೀವನ ಸಾಗಿಸುವುದಿರಲಿ, ಅಡುಗೆ ಮಾಡಲು ಬರಲಿ, ಬಿಡಲಿ ಹೊಟ್ಟೆಯನ್ನಂತೂ ಹೇಗಾದರೂ ಮಾಡಿ ತುಂಬಿಸಿಕೊಳ್ಳಲೇಬೇಕು.

ಅನ್ನ ಹೇಗೋ ಮಾಡಬಹುದು, ಸಾರು ಮಾಡುವುದು ಯಾರು ಸಾರ್‌!? ಹಾಗಾದ್ರೆ,ಇನ್ನೇನಿದೆ? ಚಿತ್ರಾನ್ನಕ್ಕಿಂತ ಅಲ್ಟಿಮೇಟಾಗಿರೋ ದಿಢೀರ್‌ ಅಡುಗೆ ಯಾವುದಿದೆ? ದಿನಾ ಚಿತ್ರಾನ್ನ ಪಲಾವ್ ಅಂತೀರಾ?

ವೇಟ್‌, ವೇಟ್‌.ನೂರೆಂಟು ಬಗೆಯ ಪಲಾವ್ ಮಾಡಬಹುದು. ಸಬ್ಸಿಗೆ (ಸಬ್ಬಸಿಗೆ ಅಂತಾನೂ ಕರೆಯುತ್ತಾರೆ) ಪಲಾವ್ ಎಂದಾದರೂ ತಯಾರಿಸಿದ್ದಿರಾ? ಇಲ್ಲವಾದರೆ ಇಲ್ಲಿದೆ ಅತ್ಯಂತ ಈಸಿ ಮೆಥಡ್‌.

ಅತ್ಯಂತ ರುಚಿಕಟ್ಟಾದ ಸಬ್ಬಸಿಗೆ ಪಲಾವ್ ನಿಂದ ಹಲವು ರೂಪದ ಲಾಭಗಳೂ ಇವೆ. ಅತ್ಯಂತ ಬೇಗನೆ ತಯಾರಿಸಬಹುದು,ಪ್ರತಿ ದಿನ ತಿಂದರೂ ಬೇಜಾರಾಗುವುದಿಲ್ಲ,ಹಸಿರು ಸೊಪ್ಪಿನಲ್ಲಿ ಕಬ್ಬಿಣದ ಅಂಶ ಜಾಸ್ತಿ, ಹೊಟ್ಟೆ ನೋವಿಗೆ ರಾಮಬಾಣ ಇತ್ಯಾದಿ ಇತ್ಯಾದಿ

LEAVE A REPLY

Please enter your comment!
Please enter your name here