ಸಾಸಿವೆಯ ಔಷದೀಯ ಉಪಯೋಗಗಳು ನಿಮಗೆ ಗೊತ್ತೇ?

0
537

ದೇಹಾರೋಗ್ಯದಲ್ಲಿ, ಸುಲಭ ಮನೆಮದ್ದಿನ ಖನಿಯಾಗಿ ಸಾಸಿವೆಯ ಪಾತ್ರ ಹಿರಿದು.ಕಬ್ಬಿಣಾಂಶ ಹೆಚ್ಚಿರುವ ಸಾಸಿವೆ ಮ್ಯಾಗ್ನೇಶಿಯಂನ ಗಣಿಯೂ ಹೌದು. ಪ್ರತಿದಿನ ಸ್ವಲ್ಪ ಸಾಸಿವೆಯನ್ನು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಹತೋಟಿಗೆ ಬರುತ್ತದೆ. ಅಸ್ತಮಾದಿಂದ ಬಳಲುತ್ತಿರುವವರಿಗೆ ಸಾಸಿವೆಯಲ್ಲಿರುವ ಸೆಲೆನಿಯಂ ಮತ್ತು ಮ್ಯಾಗ್ನೆಶಿಯಂ ದಿವ್ಯೌಷಧವೆನ್ನಿಸಿದೆ. ಕ್ಯಾನ್ಸರ್ ಕಣಗಳನ್ನು ನಾಶಮಾಡುವಲ್ಲಿ ಸಾಸಿವೆಯ ಪಾತ್ರ ಮಹತ್ವದ್ದು. ವಿಟಾಮಿನ್ ಬಿ ಕಾಂಪ್ಲೆಕ್ಸ್ ಸಹ ಇದರಲ್ಲಿ ಹೇರಳವಾಗಿದೆ. ತೂಕ ಕಡಿಮೆ ಮಾಡುವಲ್ಲಿಯೂ ಸಾಸಿವೆ ಉಪಕಾರಿ.

ಸಾಸಿವೆ ಸೌಂದರ್ಯ ವರ್ಧಕವೂ ಹೌದು. ವಿಟಾಮಿನ್ ಸಿ, ಎ ಮತ್ತು ಕೆ ಹೇರಳವಾಗಿರುವುದರಿಂದ ಯೌವನವನ್ನು ಕಾಪಾಡುವುದಕ್ಕೆ ನೆರವಾಗುತ್ತದೆ. ಆರ್ಥರೈಟಿಸ್, ಮೂಳೆ ನೋವು ಮುಂತಾದ ಸಮಸ್ಯೆಗಳಿಗೆ ಸಾಸಿವೆ ಸೇವನೆ ರಾಮಬಾಣ.

ಕೊಬ್ಬಿನಂಶ ನಿಯಂತ್ರಿಸುವಲ್ಲೂ ಸಾಸಿವೆಯ ಪಾತ್ರವಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ, ಚರ್ಮದ ಅಲರ್ಜಿಯನ್ನು ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದೆ.

ರಕ್ತದೊತ್ತಡ ನಿಯಂತ್ರಿಸುವುದಲ್ಲದೆ ಋತುಚಕ್ರ ನಿಯಮಿತವಾಗುವಂತೆ ನೋಡಿಕೊಳ್ಳುತ್ತದೆ. ಸಾಸಿವೆ ಎಣ್ಣೆಯಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಜ್ವರವಿದ್ದಾಗಲೂ ಸಾಸಿವೆ ಸೇವನೆ ಉತ್ತಮ.

• ಸಾಸಿವೆಯನ್ನು ಅರೆದು ನೋವಿರುವ ಹಲ್ಲು ಮತ್ತು ಒಸಡಿಗೆ ಲೇಪಿಸಿದರೆ ಅರ್ಧಗಂಟೆಯಲ್ಲಿ ನೋವು ಕಡಿಮೆಯಾಗುತ್ತದೆ.

• ಸಾಸಿವೆ ಎಣ್ಣೆಯನ್ನು ಹಚ್ಚಿ ಮಾಲೀಸು ಮಾಡಿದರೆ ಕೈಕಾಲು ಬಲಯುತವಾಗುತ್ತದೆ.

• ಸ್ವಲ್ಪ ಸಾಸಿವೆ ಚಿಟಿಕೆ ಉಪ್ಪು ಸೇರಿಸಿ ಅರೆದು ತುರಿಕೆ, ಕಜ್ಜಿ ಇರುವ ಕಡೆ
ಹಚ್ಚಿದರೆ ತುರಿಕೆ, ಕಜ್ಜಿ ಕಡಿಮೆಯಾಗುತ್ತದೆ.

• ಚೇಳು ಕಡಿದ ಜಾಗಕ್ಕೆ ಸಾಸಿವೆ ಅರೆದು ಹಚ್ಚಿದರೆ ನೋವು ಕಡಿಮೆಯಾಗುತ್ತದೆ.

• ವಾಂತಿ ಬರಿಸಬೇಕಾದ ಸಂದರ್ಭದಲ್ಲಿ ಬೆಚ್ಚಗಿನ ನೀರಿನಲ್ಲಿ ಸಾಸಿವೆ ಹಾಕಿ ಕುಡಿದರೆ ವಾಂತಿಯಾಗುತ್ತದೆ.

• ಆಹಾರದಲ್ಲಿ ನಿತ್ಯವೂ ಸಾಸಿವೆ ಬಳಸುವುದರಿಂದ ರುಚಿ ಹೆಚ್ಚುತ್ತದೆ. ಮತ್ತು ಆಹಾರ ಚೆನ್ನಾಗಿ ಜೀರ್ಣವಾಗಿ ವಿಸರ್ಜಿಸಲ್ಪಡುತ್ತದೆ.

LEAVE A REPLY

Please enter your comment!
Please enter your name here