ಸೀತಾಫಲವು ಭಾರತದೇಶದ ಕೃಷಿಯಲ್ಲ. ಇದರ ಮೂಲ ದಕ್ಷಿಣ ಅಮೆರಿಕ ಮತ್ತು ಕೆರಿಬಿಯನ್‌ ದ್ವೀಪದ ಹಣ್ಣಾಗಿದ್ದು,ಪೋರ್ಚುಗೀಸರು ಇದನ್ನು ಭಾರತಕ್ಕೆ ಪರಿಚಯಿಸಿದರು ಎಂಬುದಾಗಿ ಅಧ್ಯಯನಗಳು ತಿಳಿಸಿದೆ.

ನಮ್ಮ ದೇಶದಲ್ಲಿ ಸೀತಾಫಲ ಕುಟುಂಬದ ಹಣ್ಣುಗಳಿಗೆ ರಾಮಫಲ,ಸೀತಾಫಲ,ಹನುಮಾನ್‌ ಫಲ ಮುಂತಾದ ಪಕ್ಕಾ ಭಾರತೀಯ ಸಂಸ್ಕೃತಿಯ ಹೆಸರುಗಳಿದ್ದರೂ ಇದು ಪರದೇಶದ ಹಣ್ಣು.ಈ ಕುಟುಂಬದ ಎಲ್ಲ ಹಣ್ಣುಗಳ ಆರೋಗ್ಯದ ವಿಶೇಷ ಗುಣವೆಂದರೆ ಕ್ಯಾನ್ಸರ್‌ ರೋಗಿಗಳಿಗೆ ಇದು ಪ್ರಯೋಜನಕಾರಿಯೆಂದು ಸಾಬೀತಾಗಿದೆ.

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌ಗಳಾದ ಅಸಿಮೈಸಿನ್‌ ಮತ್ತು ಬುಲ್ಲಾಟಾಸಿನ್‌ ಎಂಬ ಅಂಶಗಳನ್ನು ಕ್ಯಾನ್ಸರ್‌ ಸೆಲ್‌ಗಳನ್ನು ಬೆಳೆಯದಂತೆ ತಡೆಯುತ್ತದೆ.ಉತ್ತಮ ಬಿ ವಿಟಮಿನ್ಸ್‌ಗಳು ಇರುವುದರಿಂದ ಮಿದುಳಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಸೀತಾಫಲದ ಇನ್ನೊಂದು ಉತ್ತಮ ಆರೋಗ್ಯಕರ ವಿಷಯವೆಂದರೆ ಇದರಲ್ಲಿ ಐರನ್‌ ಅಂಶ ಅಧಿಕವಾಗಿರುತ್ತದೆ.

ಆದ್ದರಿಂದ ಅನಿಮಿಯ ತೊಂದರೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಪ್ರಯೋಜನಕಾರಿ.ಸೌಂದರ್ಯ ದೃಷ್ಟಿಯಿಂದಲೂ ಸೀತಾಫಲ ಹೆಸರುವಾಸಿಯಾಗಿದೆ. ವಯಸ್ಸಾದಂತೆ ಮುಖದಲ್ಲಿ ಬರುವ ಸುಕ್ಕುಗಳನ್ನು ನಿವಾರಿಸುತ್ತದೆ.

ಇದರಲ್ಲಿರುವ ಅಸೆಟೊಜೆನಿನ್‌ ಎಂಬ ಅಂಶವು ಚರ್ಮರೋಗಗಳನ್ನು ತಡೆದು,ಚರ್ಮವು ಆರೋಗ್ಯ ಹಾಗು ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ.ಇನ್ನೂ ಅನೇಕ ಅದ್ಭುತ ಗುಣಗಳನ್ನು ಹೊಂದಿರುವ ಸೀತಾಫಲ ಒಂದು ಉತ್ತಮ ಹಣ್ಣು ಎನ್ನುವುದರಲ್ಲಿ ಸಂದೇಹವಿಲ್ಲ.

(ಸಂಗ್ರಹ)

LEAVE A REPLY

Please enter your comment!
Please enter your name here