ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು.ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ.ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.

ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ತುಂಬಾ ಒಳ್ಳೆಯದು.ಸೌತೆಕಾಯಿಂದ ಫೇಶಿಯಲ್  ಮಾಡಿ ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಬಹುದು, ಸೌತೆಕಾಯಿ ಡಯೆಟ್ ಮಾಡಿ ತೆಳ್ಳಗಾಗಬಹುದು. ಈ ಸೌತೆಕಾಯಿ ಡಯೆಟ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಸೌತೆಕಾಯಿಯ ಉಪಯೋಗ: 

ಸೌತೆಕಾಯಿಯಲ್ಲಿ 95% ನೀರು ಮತ್ತು 5% ನಾರಿನಂಶವನ್ನು ಹೊಂದಿರುವುದರಿಂದ ಇದು ದೇಹವನ್ನು ಕ್ಲೆನ್ಸ್ ಮಾಡುತ್ತದೆ. ಇದು ದೇಹಕ್ಕೆ ನೀರಿನಂಶವನ್ನು ಪೂರೈಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹವನ್ನು ತಂಪಾಗಿ ಇಡುವುದರ ಜೊತೆಗೆ ತ್ವಚೆಯ ಪೋಷಣೆಗೂ ಸಹಾಯ ಮಾಡುತ್ತದೆ. ಇದರ ಸೇವನೆ ಕಣ್ಣಿಗೂ ತುಂಬಾ ಒಳ್ಳೆಯದು.

ಸೌತೆಕಾಯಿ ಡಯೆಟ್ ವಿಧಾನ:

ಬೆಳಗ್ಗೆ: ಒಂದು ಗೋಧಿಯ ಬ್ರೆಡ್ ಮತ್ತು ಜಾಮ್ , ಒಂದು ಬಟ್ಟಲು ಸೌತೆಕಾಯಿ ಸಲಾಡ್, ಒಂದು ಬಿಸಿ ಕಪ್ ಟೀ ಇದನ್ನು ಬೆಳಗ್ಗಿನ ತಿಂಡಿಯ ಬದಲು ಸೇವಿಸಬೇಕು.

ಮಧ್ಯಾಹ್ನ: ಬೇಯಿಸಿದ ಮೊಟ್ಟೆ ಅಥವಾ ಕಡಿಮೆ ಕೊಬ್ಬಿನ ಚಿಕ್ಕನ್, ಬ್ರೆಡ್ , ಮತ್ತು ಸೌತೆಕಾಯಿ ಸಲಾಡ್ ಅನ್ನು ಮಧ್ಯಾಹ್ನದ ಉಪಾಹಾರವಾಗಿ ಸೇವಿಸಬಹುದು.

ಸ್ನ್ಯಾಕ್ಸ್: ಸೇಬು, ಬಾಳೆಹಣ್ಣು, ಬೆಣ್ಣೆಹಣ್ಣಿನ ಜ್ಯೂಸ್ ಸೇವಿಸಬಹುದಾಗಿದೆ.

ರಾತ್ರಿ ಊಟ: ಬರೀ ಸಲಾಡ್ ಮಾತ್ರ ಸೇವಿಸಬೇಕು.

 

LEAVE A REPLY

Please enter your comment!
Please enter your name here