ಬಿಗ್ ಬಾಸ್ ನಲ್ಲಿ ವಾರಗಳಿಂದ ಸೇಫ್ ಆಗಿದ್ದ ನಟಿ ತೇಜಸ್ವಿನಿ, ಈ ವಾರ ನಾಮಿನೇಟ್ ಆಗಿದ್ದಾರೆ.ಬಿಗ್ ಬಾಸ್ ಮನೆಯಿಂದ ನಟಿ ತೇಜಸ್ವಿನಿ ಹೊರ ಬರುವ ಸಾಧ್ಯತೆ ಇದೆ ಅದಕ್ಕೆ ಕಾರಣ ತೇಜಸ್ವಿನಿ ತಂದೆಯವರ ಅನಾರೋಗ್ಯ.

ತೇಜಸ್ವಿನಿ ತಂದೆಯವರಿಗೆ ಕಿಡ್ನಿ ಆಪರೇಷನ್ ನಡೆದಿದ್ದು ಹೀಗಾಗಿ, ”ಬಿಗ್ ಬಾಸ್ ಆಟವನ್ನು ಬಿಟ್ಟು ಹೊರಗೆ ಬರುತ್ತೀರಾ.?” ಎಂದು ಬಿಗ್ ಬಾಸ್ ಕೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ತೇಜಸ್ವಿನಿ ತಂದೆಯವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕಿಡ್ನಿ ಫೇಲ್ಯೂರ್ ಆಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.ಈ ಸಮಯದಲ್ಲಿ ತೇಜಸ್ವಿನಿ ಇರುವಿಕೆಯನ್ನು ಆಕೆಯ ಕುಟುಂಬ ಬಯಸುತ್ತಿದೆ.ಹಾಗಾಗಿ ಈ ವಾರ ತೇಜಸ್ವಿನಿ ಅವರು ಎಲಿಮಿನೇಟ್ ಆಗಬಹುದು.

LEAVE A REPLY

Please enter your comment!
Please enter your name here