ಸದ್ಯ ಗಾಂಧಿನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಖರೀದಿ ಮಾಡಿರುವುದೇ ಸದ್ದು. ಸಂಕ್ರಾಂತಿ ಹಬ್ಬದಂದು ಕಾರನ್ನ ಖರೀದಿ ಮಾಡಿರುವ ದರ್ಶನ್ ಮೊದಲ ದಿನವೇ ಕಾರ್ ನಲ್ಲಿ ಮೈಸೂರಿಗೆ ರೈಡ್ ಹೋಗಿದ್ದಾರೆ.

ಹಮ್ಮರ್, ಜಾಗ್ವಾರ್, ಆಡಿ, ಫಾರ್ಚುನರ್ ಗಳಂತಹ ಲಗ್ಸುರಿ ಕಾರಿಗಳ ಒಡೆಯನಾಗಿದ್ದ ದರ್ಶನ್ ಈಗ ಜಗ್ಗತ್ತಿನ ದುಬಾರಿ ಕಾರುಗಳ ಲೀಸ್ಟ್ ನಲ್ಲಿರುವ ಬಿಳಿ ಬಣ್ಣದ ಲಂಬೋರ್ಗಿನಿಯನ್ನ ಕೊಂಡುಕೊಂಡಿದ್ದಾರೆ.

ಮನೆಯ ಬಳಿ ಕಾರಿಗೆ ಪೂಜೆ ಸಲ್ಲಿಸಿ ನಂತರ ಮೈಸೂರಿಗೆ ಪ್ರಯಾಣ ಬೆಳೆಸಿದ ದಚ್ಚು ಇಂದು (ಜ.16)ರಂದು ಚಾಮುಂಡಿ ಬೆಟ್ಟದಲ್ಲಿ ಕಾರ್ ಗೆ ಪೂಜೆ ಮಾಡಿಸಿಕೊಂಡು ಬೆಂಗಳೂರಿಗೆ ಹಿಂತಿರುಗಿದ್ದಾರೆ.

ದರ್ಶನ್ ಬಳಿ ಸಾಕಷ್ಟು ಕಾರ್ ಗಳಿದ್ದರು ಇದೇ ಕಾರ್ ಖರೀದಿ ಮಾಡಲು ಕಾರಣವೇನು? ಈ ಕಾರ್ ನಲ್ಲಿರುವ ವಿಶೇಷತೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಜಗತ್ತಿನ ದುಬಾರಿ ಕಾರುಗಳ ಪಟ್ಟಿಯಲ್ಲಿರುವ ಲಂಬೋರ್ಗಿನಿ ಕಾರ್ ಅನ್ನು ದರ್ಶನ್ ಖರೀದಿಸಿದ್ದಾರೆ. ಡಿ ಬಾಸ್ ಕೊಂಡುಕೊಂಡಿರುವ ಲಂಬೋರ್ಗಿನಿ ಆವೆಡೆಡರ್ ಭಾರತದಲ್ಲಿ 5 ಕೋಟಿ 1 ಲಕ್ಷ ಬೆಲೆ ಬಾಳುವ ಕಾರ್ ಆಗಿದೆ.

ಇಟಲಿ ಕಂಪನಿಯ ಲಂಬೋರ್ಗಿನಿ ಮೂರು ಮಾಡೆಲ್ ಗಳಲ್ಲಿ ಲಭ್ಯವಿದೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಯ್ಕೆ ಮಾಡಿಕೊಂಡಿರುವುದು ಐದು ಕೋಟಿ ರೂಪಾಯಿಯ ಲಂಬೋರ್ಗಿನಿ ಆವೆಡೆಡರ್. ವಿಶೇಷತೆ ಎಂದರೆ ಕಾರ್ ನ ಎರಡು ಡೋರ್ ಗಳು ಮೇಲ್ಬಾಗದಲ್ಲಿ ತೆಗೆದುಕೊಳ್ಳುತ್ತವೆ.

ಲಂಬೋರ್ಗಿನಿ ಆವೆಡೆಡರ್ ಅತಿ ವೇಗವಾಗಿ ಚಲಿಸುವ ಕಾರ್ ಆಗಿದೆ. 320 ಗರಿಷ್ಠ ವೇಗವನ್ನ ಹೊಂದಿದ್ದು 5204 ಸಿಸಿ ಇದೆ. ಇದರ ಗ್ರೌಂಡ್ ಕ್ಲಿಯರೆನ್ಸ್ ಕೇವಲ 135 ಎಂ ಎಂ ಎನ್ನುವುದು ವಿಶೇಷ.

ಈ ಕಾರಿನಲ್ಲಿ ಡೋರ್ ಓಪನ್ ಮಾಡುವುದರಿಂದ ಹಿಡಿದು ಗೇರ್, ವಿಂಡೋ ಎಲ್ಲವೂ ಆಟೋಮೆಟಿಕ್ ನಿಂದ ಕೂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ ೧೦ಕಿ ಲೋ ಮೀಟರ್ ಮೈಲೇಜ್ ಸಿಗುವುದು ಅನುಮಾನ.

ದರ್ಶನ್ ಆರಾಧಿಸುವ ದೈವವಾಗಿರುವ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕಾರಿಗೆ ಮೊದಲ ಪೂಜೆಯನ್ನ ಸಲ್ಲಿಸಿದ್ದಾರೆ. ಮೈಸೂರಿನ ಸ್ನೇಹಿತರು ಮತ್ತು ಆಪ್ತರು ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಅಭಿಮಾನಿಗಳಂತು ದರ್ಶನ್ ದುಬಾರಿ ಕಾರು ಖರೀದಿ ಮಾಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಲ್ಯಾಂಬೋರ್ಗಿನಿ ಒಡೆಯರಾದ ಕನ್ನಡ ಕಲಾವಿದರಲ್ಲಿ ದರ್ಶನ್ ಮೊದಲಿಗರು. ಅವರಿಗೆ ಈ ಕಾರು ಕೊಳ್ಳಬೇಕೆಂದು ತುಂಬಾ ಆಸೆ ಇತ್ತಂತೆ. ಆ ಆಸೆ ಈಗ ನೆರವೇರಿದೆ ಎನ್ನುತ್ತದೆ ಮೂಲಗಳು.

LEAVE A REPLY

Please enter your comment!
Please enter your name here