ಐಪಿಎಲ್ ಕ್ರಿಕೆಟ್ ಟೂರ್ನಿ ಕೆಲ ದಿನದ ಹಿಂದೆಯಿಂದ ಶುರುವಾಗಿದೆ. ಈ ಬಾರಿಯ ಸೀಸನ್ ಸಿಕ್ಕಾಪಟ್ಟೆ ಕ್ರೇಜ್ ಹೊಂದಿದೆ. ಪ್ರತಿದಿನ ಐಪಿಎಲ್ ಮ್ಯಾಚ್ ನೋಡುವುದು ಎಲ್ಲರ ಕಾಯಕ ಆಗಿ ಬಿಟ್ಟಿದೆ.

ಐಪಿಎಲ್ ಪಂದ್ಯವನ್ನು ನೋಡಿ ಖುಷಿ ಪಡುವ ಪ್ರೇಕ್ಷಕ ವರ್ಗ ಒಂದು ಕಡೆ ಆದರೆ ಇನ್ನೊಂದು ಕಡೆ ಐಪಿಎಲ್ ಗೆ ಇನ್ನೊಂದು ಮುಖ ಇದೆ. ಅನೇಕರು ಐಪಿಎಲ್ ಶುರು ಆಗುತ್ತಿದ್ದ ಹಾಗೆ ದುಡ್ಡು ಮಾಡುವ ಪ್ಲಾನ್ ಮಾಡುತ್ತಾರೆ. ದುರಾಸೆ ಬಿದ್ದು ಐಪಿಎಲ್ ಬೆಟ್ಟಿಂಗ್ ಆಡಿ ಸಾಲ ಮಾಡಿಕೊಳ್ಳುತ್ತಾರೆ. ಆದರೆ ಅಂತಹವರಿಗೆ ಈಗ ನಟ ದರ್ಶನ್ ಬುದ್ದಿ ಹೇಳುತ್ತಿದ್ದಾರೆ.

ಐ ಪಿ ಎಲ್ ಅನ್ನು ಒಂದು ಮ್ಯಾಚ್ ತರ ನೋಡಿ ಎಂಜಾಯ್ ಮಾಡಿ. ಅದರಿಂದ ಹಾಳಾಗಬೇಡಿ ಎನ್ನುತ್ತಿದ್ದಾರೆ ದರ್ಶನ್.

ದರ್ಶನ್ ಬಿಡುಗಡೆ ‘ಐಪಿಎಲ್ ಗ್ಯಾಂಬ್ಲರ್ಸ್’:

ಐಪಿಎಲ್ ಬಗ್ಗೆ ಯುವಕರ ತಂಡವೊಂದು ಐಪಿಎಲ್ ಗ್ಯಾಂಬ್ಲರ್ಸ್ ಎಂಬ ಹೊಸ ಕಿರುಚಿತ್ರವನ್ನು ಮಾಡಿದ್ದಾರೆ. ಈ ಶಾರ್ಟ್ ಫಿಲ್ಮ್ಸ್ ಅನ್ನು ನಟ ದರ್ಶನ್ ರಿಲೀಸ್ ಮಾಡಿದ್ದಾರೆ. ಇದೇ ವೇಳೆ ಐಪಿಎಲ್ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ಐಪಿಎಲ್ ಗ್ಯಾಂಬ್ಲರ್ಸ್
ಎಲ್ಲರೂ ಬೆಟ್ಟಿಂಗ್ ನಲ್ಲಿ ಕೂತಿರುತ್ತಾರೆ.

ಈಗ ಐಪಿಎಲ್ ಶುರು ಆಗಿದೆ ಈ ವಿಷಯ ಇಟ್ಟುಕೊಂಡು ಹುಡುಗರು ಒಂದು ಕಿರುಚಿತ್ರ ಮಾಡಿದ್ದಾರೆ. ಐಪಿಎಲ್ ಗ್ಯಾಂಬ್ಲರ್ಸ್ ಅಂತ ಇದು ಒಂದೊಳ್ಳೆ ಕಿರುಚಿತ್ರ. ಪ್ರತಿ ವರ್ಷ ಐ ಪಿ ಎಲ್ ಕ್ರಿಕೆಟ್ ಮ್ಯಾಚ್ ಶುರು ಆದಾಗ ಎಲ್ಲರೂ ಬೆಟ್ಟಿಂಗ್ ನಲ್ಲಿ ಕೂತಿರುತ್ತಾರೆ. ಮ್ಯಾಚ್ ನೋಡಿದಕ್ಕಿಂತ ಜಾಸ್ತಿ ಬೆಟ್ಟಿಂಗ್ ಕಟ್ಟುತ್ತಿರುತ್ತಾರೆ ಎಂದಿದ್ದಾರೆ ದರ್ಶನ.

ಐಪಿಎಲ್ ಅನ್ನು ಒಂದು ಮ್ಯಾಚ್ ತರ ನೋಡಿ
ನಿಮ್ಮ ಲೈಫ್ ಹಾಳು ಮಾಡಿಕೊಳ್ಳಬೇಡಿ.

ಐಪಿಎಲ್ ಬೆಟ್ಟಿಂಗ್ ಅಂದರೆ ಎಲ್ಲೆಲ್ಲಿಂದನೋ ಸಾಲ ಮಾಡಿ ಮತ್ತ್ಯಾರಿಗೋ ಕೊಡಬಹುದು ಏನೆನೋ ಇದೆ. ಆದರೆ ದಯವಿಟ್ಟು ಐಪಿಎಲ್ ಅನ್ನು ಒಂದು ಮ್ಯಾಚ್ ತರ ನೋಡಿ ಎಂಜಾಯ್ ಮಾಡಿ. ಐಪಿಎಲ್ ನಲ್ಲಿ ಆಟ ಆಡುವ ಆಟಗಾರರು ಅಂತ ತುಂಬ ಕಷ್ಟ ಪಟ್ಟು ಆಡುತ್ತಿರುತ್ತಾರೆ ಆದರೆ ನೀವು ಅದರಿಂದ ನಿಮ್ಮ ಲೈಫ್ ಅನ್ನು ಹಾಳು ಮಾಡಿಕೊಳ್ಳಬೇಡಿ.

ಆಶೀರ್ವಾದ ಮಾಡಿ ನೋಡಿ ಪ್ರೋತ್ಸಾಹ ಕೊಡಿ. ಐಪಿಎಲ್ ಕ್ರಿಕೆಟ್ ಬಗ್ಗೆ ಇರುವ ಈ ಎಲ್ಲ ವಿಷಯಗಳ ಮೇಲೆ ಬೆಸ್ ಆಗಿರುವ ಕಿರುಚಿತ್ರ ಐಪಿಎಲ್ ಗ್ಯಾಂಬ್ಲರ್ಸ್ ಬಂದಿದೆ. ಇದನ್ನು ನೋಡಿ ಪ್ರೋತ್ಸಾಹ ಕೊಡಿ ಎಲ್ಲರಿಗೆ ಆಶೀರ್ವಾದ ಮಾಡಿ ಅಂತ ಕೇಳಿಕೊಳ್ಳುತ್ತಾರೆ.

ಅಶ್ವಥ್ಗೆ ಬೆಳಕಾದ ಡಿ ಬಾಸ್:

ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಈ ಸುದ್ದಿ ಹೊರಬಂದಿತ್ತು. ಒಬ್ಬ ದೊಡ್ಡ ನಟನ ಮಗನ ಇಂದಿನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಆದರೆ ಈಗ ಅದೇ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿದೆ.

ಶಂಕರ್ ಅಶ್ವಥ್ ಖುಷಿಗೆ ಕಾರಣ ಆಗಿರುವುದು ಬೇರೆ ಯಾರು ಅಲ್ಲ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು ಈ ಹಿಂದೆ ಶಂಕರ್ ಅಶ್ವಥ್ ಅವರ ಪರಿಸ್ಥಿತಿ ಕಂಡು ಬೇಸರಗೊಂಡಿದ್ದ ದರ್ಶನ್ ಅವರಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಈಗ ತಮ್ಮ ಮಾತಿನಂತೆ ದರ್ಶನ್ ನಡೆದುಕೊಂಡಿದ್ದಾರೆ.

ತಾವು ನಟಿಸುತ್ತಿರುವ ಯಜಮಾನ ಸಿನಿಮಾದಲ್ಲಿ ಶಂಕರ್ ಅಶ್ವಥ್ ಅವರಿಗೆ ದರ್ಶನ್ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಅವರು ಶಂಕರ್ ಅಶ್ವಥ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಿನಿಮಾದ ಶೂಟಿಂಗ್ ನಲ್ಲಿ ಇದೀಗ ಶಂಕರ್ ಅಶ್ವಥ್ ಭಾಗಿಯಾಗಿದ್ದು ಈ ವೇಳೆ ದರ್ಶನ್ ಜತೆಗೆ ಫೋಟೋ ತೆಗೆದುಕೊಂಡಿದ್ದಾರೆ.

ಯಜಮಾನ ನಟ ದರ್ಶನ್ ಅವರ ಹೊಸ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಬಿಸುರೇಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ವಿಷ್ಣುವರ್ಧನ ಸಿನಿಮಾದ ಖ್ಯಾತಿಯ ಪಿಕುಮಾರ್.

ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕುರುಕ್ಷೇತ್ರ ನಂತರ ಯಜಮಾನ ಚಿತ್ರ ಬಿಡುಗಡೆಯಾಗಲಿದೆ.

ಸುದ್ದಿಕೃಪೆ ಫಿಲ್ಮಿ ಬೀಟ್ ಕನ್ನಡ

LEAVE A REPLY

Please enter your comment!
Please enter your name here