ನೀವು ಕೋಟ್ಯಾನುಕೋಟಿ ಬೆಲೆ ಬಾಳೋ ದುಬಾರಿ ಕಾರುಗಳ ಬಗ್ಗೆ ಕೇಳಿರ್ತೀರಾ. ಲಕ್ಷ ಬಿಡಿ ಕೋಟಿ ಕೋಟಿ ಬೆಲೆ ಬಾಳೋ ಕಾರುಗಳು ಸಹ ಭಾರತದಲ್ಲಿ ಸುಮಾರು ಇವೆ. ಯಾವತ್ತಾದ್ರೂ 132 ಕೋಟಿ ದುಡ್ಡನ್ನ ಬರಿ ಒಂದು ನಂಬರ್ ಪ್ಲೇಟ್ ಗಾಗಿ ಕೊಡೋದನ್ನ ಕೇಳಿದಿರಾ?

ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು:

ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ ೫ ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು ಇದೀಗ 132 ಕೋಟಿ ಮೌಲ್ಯ ಹೊಂದಿದ್ದು ಆಟೋ ಮೊಬೈಲ್ ಉದ್ಯಮದಲ್ಲೇ ಹೊಸ ಸಂಚಲನ ಸೃಷ್ಠಿಸಿದೆ.

2008ರಿಂದ ಎಫ್1 ನಂಬರ್ ಪ್ಲೇಟ್ ಮಾಲೀಕನಾಗಿರುವ ಖಾನ್ ಡಿಸೈನ್ ಮಾಲೀಕ ಅಫ್ಜಲ್ ಖಾನ್ ಇದೀಗ ಅದೇ ನಂಬರ್ ಅನ್ನು ಮಾರಾಟ ಮಾಡುತ್ತಿದ್ದು, ಫ್ಯಾನ್ಸಿ ನಂಬರ್ ಪ್ಲೇಟ್‌ನ ಬೆಲೆಯನ್ನು 132 ಕೋಟಿಗೆ ನಿಗದಿಪಡಿಸಿದ್ದಾನೆ.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು:

ಇತಿಹಾಸದ ನಂಬರ್ ಪ್ಲೇಟ್:

F1 ಎಂಬುದು ಖಾನ್ ಅವರ ಫೇವರಿಟ್ ನಾವಲ್ಟಿ ಪ್ಲೇಟ್ ನಂಬರ್ ಆಗಿದ್ದು ಇದು 109 ವರ್ಷಗಳ ಇತಿಹಾಸವನ್ನು ಹೊಂದಿದೆ. 2008ರಲ್ಲಿ ಖಾನ್ ಅವರು 440000 ಬ್ರಿಟಿಷ್ ಪೌಂಡ್ ನೀಡಿ ( ಅಂದಾಜು 4.5 ಕೋಟಿ ರು) ಖರೀದಿಸಿದ್ದರು.

ಅಂದರೆ 10 ವರ್ಷದೊಳಗೆ F1 ನಾವಲ್ಟಿ ಪ್ಲೇಟ್ ಮೌಲ್ಯವು 33 ಪಟ್ಟು ದುಪ್ಪಟ್ಟುಗೊಂಡಿದೆ. ಈ ಎಫ್1 ನಂಬರ್ ಪ್ಲೇಟ್ ಅತಿ ದುಬಾರಿ ಬುಕಾಟಿ ವೆರೊನ್ ಹಾಗೂ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎರ್ ಮೆಕ್‌ಲ್ಯಾರೆನ್‌ನಲ್ಲಿ ಆಳವಡಿಸಲಾಗಿದೆ. ಇದರ ಜೊತೆಗೆ ಖಾನ್ ಅವರು 4HRH ಮತ್ತು NO1 ನಂಬರ್‌ನ ಹೆಮ್ಮೆಯ ಮಾಲೀಕರೂ ಕೂಡಾ ಆಗಿದ್ದಾರೆ.

ಈ ಹಿಂದಿನ ರೆಕಾರ್ಡ್:

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ. ಇಂತಹದ್ದೆ ಘಟನೆ ಈ ಹಿಂದೆ ಸಯೀದ್ ಖೋರಿ ಎಂಬ ಅಬುದಾಬಿ ಉದ್ಯಮಿ ಯುನೈಟೈಡ್ ಅರಬ್ ಎಮಿರೇಟ್ಸ್‌ಗೆ 70 ಕೋಟಿ ನೀಡಿ ರುಪಾಯಿ ನೀಡಿ 1 ಫ್ಯಾನ್ಸಿ ನಂಬರ್ ಖರೀದಿಸಿದ್ದರು. ಇದುವರೆಗೂ ಇದೇ ಜಗತ್ತಿನ ಅತಿ ದುಬಾರಿ ನಂಬರ್ ಪ್ಲೇಟ್ ಖರೀದಿಯಾಗಿತ್ತು.

ಇನ್ನೂ ಅಧಿಕ:

ಆದರೆ ಇದನ್ನು ಹಿಂದಿಕ್ಕಿಲಿರುವ ಬ್ರಿಟನ್ ಜನಪ್ರಿಯ ಎಫ್1 ನಂಬರ್ ಪ್ಲೇಟ್ ಇದೀಗ 132 ಕೋಟಿ ಆರಂಭಿಕ ಬೆಲೆ ಹೊಂದಿದ್ದು, ಇದು ಹಾರಾಜು ವೇಳೆ ಇನ್ನು ಹೆಚ್ಚಾಗುವ ಸಾಧ್ಯತೆಗಳು ಕೂಡಾ ಇವೆ. ಇನ್ನು ಹೊಸ ಫ್ಯಾನ್ಸಿ ನಂಬರ್ ಖರೀದಿಸುವ ಕಾರು ಮಾಲೀಕನು ಮುಂದಿನ ಐದು ವರ್ಷಗಳ ಅವಧಿಗೆ ಆ ನಂಬರ್ ಮೇಲೆ ಅವರು ಅಧಿಕಾರ ಹೊಂದಿರುತ್ತಾರೆ.

ತದನಂತರ ಅವರು ಹೆಚ್ಚುವರಿ ಮೊತ್ತಕ್ಕೆ ಮಾರಾಟ ಮಾಡಬಹುದಾಗಿದ್ದು, ಇಲ್ಲವೇ ಹೆಚ್ಚುವರಿ ಮೊತ್ತ ಪಾವತಿಸಿ ಅದೇ ನಂಬರ್ ಪ್ಲೇಟ್ ಅನ್ನು ಮುಂದುವರಿಸುವ ಅವಕಾಶ ಕೂಡಾ ಇರುತ್ತದೆ. ಆದ್ರೆ ಅದೇನೇ ಇರಲಿ ಒಂದು ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ನೂರಾರು ಕೋಟಿ ವ್ಯಯ ಮಾಡುವ ಜನ ಇದ್ದಾರೆ ಅಲ್ಲಾ ಅನ್ನೋದೆ ವಿಚಿತ್ರ ಅನಿಸುತ್ತೆ. ಆದ್ರೂ ಇದು ಸತ್ಯವೇ.

ಅತ್ಯಂತ ವೇಗದ ಕಾರು:

ಇನ್ನೊಂದು ವಿಚಾರ ಅಂದ್ರೆ ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬುಗಾಟಿಯು ಕೆಲದಿನಗಳ ಹಿಂದಷ್ಟೇ ಹೊಸ ಚಿರೊನ್ ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿದ್ದು, ಬರೋಬ್ಬರಿ 40 ಕೋಟಿ ಬೆಲೆ ಹೊಂದುವ ಮೂಲಕ ಜಗತ್ತಿನ ಸೂಪರ್ ಕಾರುಗಳಲ್ಲೇ ವಿಶೇಷ ಮಾದರಿ ಎನಿಸಿದೆ.

ಸುದ್ದಿಕೃಪೆ ಡಿ.ಎಸ್ ಕನ್ನಡ

LEAVE A REPLY

Please enter your comment!
Please enter your name here